

ದೇಹದ ಬೊಜ್ಜನ್ನು ಇಳಿಸುವುದು ಸಾಮಾನ್ಯವಾಗಿ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ಹರಿಯಾಣದ ಗುರಗಾಂವ್ನ ದಿನೇಶ್ ಮೋಹನ್ ಎನ್ನುವವರು ಬೊಜ್ಜು ಕರಗಿಸಿಕೊಂಡು 61ನೇ ವಯಸ್ಸಿನಲ್ಲಿ ಫ್ಯಾಶನ್ ಮಾಡೆಲ್ ಆಗಿ ಹೆಸರು ಮಾಡಿದ್ದಾರೆ. 44 ವರ್ಷದ ತನಕ ತುಂಬ ದಪ್ಪಗಿದ್ದ ಅವರಿಗೆ ಜಾಸ್ತಿ ತಿನ್ನುವ ಅಭ್ಯಾಸವೂ ಇತ್ತು.
ಎದ್ದೇಳುವುದಕ್ಕೂ ಕಷ್ಟಪಡುತ್ತಿದ್ದ ಅವರು 2004ರಿಂದ 2014ರವರೆಗೆ ಬಹಳ ತೊಂದರೆ ಅನುಭವಿಸಿದ್ದರು. ಖಿನ್ನತೆಗೊಳಗಾಗಿದ್ದ ಅವರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ನಂತರ ಜಿಮ್ೆ ಹೋಗಲಾರಂಭಿಸಿದರು.
ಜತೆಗೆ ಆಹಾರಪದ್ಧತಿಯನ್ನೂ ಬದಲಿಸಿಕೊಂಡರು. ಎಂಟು ತಿಂಗಳಲ್ಲಿ ಫಲಿತಾಂಶ ಕಂಡ ಅವರು 2016ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿಂದ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.