

ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ಪತ್ತೆಯಾದ ಹೂವೊಂದು ಜಗತ್ತಿನಲ್ಲೇ ಅತಿ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 111 ಸೆಂ.ಮೀ. ವ್ಯಾಸದ ‘ರಫ್ಲೆಷಿಯಾ ಟ್ಯೂಯಾನ್ ಮುಡೆ’ ಎಂಬ ಹೆಸರಿನ ಈ ಬೃಹತ್ ಗಾತ್ರದ ಕೆಂಪು ಹೂವಿನ ಚಿತ್ರವನ್ನು ‘ಸುಮಾತ್ರ ಬರಾತ್ ನೇಚರ್ ಕನ್ಸರ್ವೆಷನ್ ಏಜೆನ್ಸಿ’ ಶುಕ್ರವಾರ (ಜ. 3) ಬಿಡುಗಡೆ ಮಾಡಿದೆ.
ಕೆಲವು ವರ್ಷಗಳ ಹಿಂದೆ ಪಶ್ಚಿಮ ಸುಮಾತ್ರ ಅರಣ್ಯಪ್ರದೇಶದಲ್ಲಿ ಕಾಣಿಸಿಕೊಂಡಿದ್ದ 107 ಸೆಂ.ಮೀ. ವ್ಯಾಸದ ಹೂವು ದಾಖಲೆ ನಿರ್ವಿುಸಿತ್ತು. ಸಾಮಾನ್ಯವಾಗಿ 100 ಸೆಂ.ಮೀ. ವ್ಯಾಸ ಹೊಂದಿರುವ ಈ ಹೂವು ಒಂದು ವಾರ ಮಾತ್ರ ಅರಳಿರುತ್ತದೆ. ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲೂ ಇದೇ ಜಾತಿಯ ಹೂಗಳು ಬೆಳೆಯುತ್ತವೆ.