ಚಳಿಯಿಂದ ಪಾರಾಗಲು ವಿಶಿಷ್ಟ ಟ್ರಿಕ್ ಬಳಸಿದ ತರಕಾರಿ ವ್ಯಾಪಾರಿ; 'ಸಖತ್‌ ಹಾಟ್‌ ಮಗ…' ಎಂದ ನೆಟ್ಟಿಜನ್ಸ್

video
Published on

ನವದೆಹಲಿ: ಕಳೆದ ಒಂದು ತಿಂಗಳಿನಿಂದ ಉತ್ತರ ಭಾರತದ ಬಹುತೇಕ ಪ್ರದೇಶಗಳಲ್ಲಿ ತಾಪಮಾನವು ಘನೀಕರಿಸುವ ಹಂತದತ್ತ ಸಾಗುತ್ತಿದೆ. ಹಲವೆಡೆ ಕನಿಷ್ಠ ಉಷ್ಣಾಂಶ 1 ರಿಂದ 2 ಡಿಗ್ರಿ ತಲುಪಿದ್ದು, ಬೆಚ್ಚನೆಯ ಬಟ್ಟೆಯಲ್ಲೂ ಜನರು ಮನೆಯೊಳಗೆ ನಡುಗುತ್ತಿದ್ದಾರೆ. ಚಳಿ ಗಾಳಿಯಿಂದಾಗಿ ಬೀದಿ ಬದಿ ಕುಳಿತು ವ್ಯಾಪಾರ ಮಾಡುವವರ ಸ್ಥಿತಿ ಹದಗೆಡುತ್ತಿದೆ. ಈ ಸಮಯದಲ್ಲಿ ಜನರು ಚಳಿಯಿಂದ ಪಾರಾಗಲು ವಿಶಿಷ್ಟ ವ್ಯವಸ್ಥೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಹೌದು, ತರಕಾರಿ ವ್ಯಾಪಾರಿಯೊಬ್ಬರು ಚಳಿಯಿಂದ ರಕ್ಷಿಸಿಕೊಳ್ಳಲು ಕಂಡುಕೊಂಡ ಜುಗಾಡ್ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಸದ್ಯ ತರಕಾರಿ ಮಾರಾಟಗಾರನ ಈ ವ್ಯವಸ್ಥೆಯನ್ನು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಬೆರಗಾಗುವುದಿರಲಿ, ನಕ್ಕು ನಕ್ಕು ಸುಸ್ತಾಗಿದ್ದಾರೆ. ಅಷ್ಟೇ ಅಲ್ಲ, ಚಳಿಯಿಂದ ಪಾರಾಗಲು ಅನುಸರಿಸಿದ ಈ ತಂತ್ರಗಳ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಚಳಿಯಿಂದ ಪಾರಾಗಲು ತರಕಾರಿ ಮಾರಾಟಗಾರನ ವಿಶಿಷ್ಟ ತಂತ್ರದ ವಿಡಿಯೋವನ್ನು @Uddin_Heritor ಎಂಬ ಬಳಕೆದಾರರು Instagram ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತರಕಾರಿ ಮಾರುತ್ತಿದ್ದ ವ್ಯಕ್ತಿಯೊಬ್ಬ ರಾತ್ರಿ ಭಯಂಕರ ಚಳಿಯಲ್ಲಿ ರಸ್ತೆಬದಿಯಲ್ಲಿ ಸ್ಟೂಲ್ ಮೇಲೆ ಕುಳಿತಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲ, ಈ ವ್ಯಕ್ತಿ ತನ್ನ ಕಬ್ಬಿಣದ ಸ್ಟೂಲ್ ಕೆಳಗೆ ಬೆಂಕಿಯನ್ನು ಹಾಕಿದ್ದಾನೆ. ಇದರಿಂದ ತರಕಾರಿ ಮಾರುವವನಿಗೆ ಕೆಳಗಿನಿಂದ ಬಿಸಿ ತಟ್ಟುತ್ತಿದ್ದು, ಚಳಿಯಿಂದ ರಕ್ಷಣೆ ಪಡೆದಿದ್ದಾನೆ. ಈ ವಿಡಿಯೋ ನೋಡಿದ ಜನರು ಬಹಳ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಸಾಕಷ್ಟು ಕಾಮೆಂಟ್ ಮಾಡುತ್ತಿರುವ ಜನ 
ವಾರದ ಹಿಂದೆ ಅಪ್‌ಲೋಡ್ ಮಾಡಿರುವ ಈ ವಿಡಿಯೋವನ್ನು 54 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಬಗ್ಗೆ ನಾನಾ ರೀತಿಯ ಕಾಮೆಂಟ್‌ಗಳು ಕೂಡ ಬರುತ್ತಿವೆ. ಓರ್ವ ಬಳಕೆದಾರ ಕಳವಳ ವ್ಯಕ್ತಪಡಿಸಿ, ಅವರು ತಮ್ಮನ್ನು ತಾವು ಹಾನಿ ಮಾಡಿಕೊಳ್ಳುತ್ತಿದ್ದಾರೆಂದರೆ, ಇನ್ನೊರ್ವ ಬಳಕೆದಾರರು, ಇದನ್ನು ಹಾಟ್ ಸೀಟ್ ಎಂದು ಕರೆದಿದ್ದಾರೆ. ಮತ್ತೆ ಕೆಲವರು "ಅಂಕಲ್ ಜಿ, ಇದು ಕಡಿಮೆ ಉರಿಯಲ್ಲಿದೆ. ನೀವೆಲ್ಲರೂ ತಪ್ಪಾಗಿ ಅರ್ಥಮಾಡಿಕೊಂಡಿದ್ದೀರಿ. ಅಣ್ಣ, ಒಳಗೆ ತರಕಾರಿ ಬೇಯಿಸುತ್ತಿದ್ದಾರೆ'' ಹೀಗೆ ವಿಡಿಯೋ ಕುರಿತು ಇಂತಹ ಹಲವು ತಮಾಷೆಯ ಕಾಮೆಂಟ್‌ಗಳು ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net