ಜೈಲಿನಲ್ಲಿ ಕೇಜ್ರಿವಾಲ್ ಆರೋಗ್ಯ ಕ್ಷಣಿಸುತ್ತಿರುವ ಬಗ್ಗೆ ದೇಶಾದ್ಯಂತ ತೀವ್ರ ಪ್ರತಿಭಟನೆ: ಎಎಪಿ

jagadish
Published on

ಬೆಂಗಳೂರು:ಖೋಟ್ಟಿ ಅಬಕಾರಿ ಹಗರಣದ ಕೇಸ್‌ನಲ್ಲಿ ಅಕ್ರಮ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ರವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿರುವ ಕಾರಣ ಪಕ್ಷದ ವತಿಯಿಂದ ಜುಲೈ 30 ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ತೀವ್ರ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಎಎಪಿ ತಿಳಿಸಿದೆ.

ಸೆರೆಮನೆಯಲ್ಲಿ ಕೇಜ್ರಿವಾಲ್ ರವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದ್ದು, ಇವರ ಜೀವಕ್ಕೆ ಭಾರಿ ಸಂಚಕಾರ ಇರುವುದೆಂಬ ಸ್ಪಷ್ಟ ಅನುಮಾನ ಕಾಡುತ್ತಿದೆ. ನಿರಂಕುಶ ಮೋದಿ ಪ್ರಭುತ್ವದ ವಿರುದ್ಧ ಹಾಗೂ ಕೇಜ್ರಿವಾಲ್ ಅವರು ಜೀವಂತವಾಗಿ ಸೆರೆಮನೆಯಿಂದ ಹೊರ ಬರಬೇಕೆಂದು ಆಗ್ರಹಿಸಿ ಅಂದು ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಜಾಮೀನು ನೀಡಿದ್ದರೂ ಸಹ ಸಿಬಿಐ ನವರು ಒಬ್ಬ ಮುಖ್ಯಮಂತ್ರಿಯ ವಿರುದ್ಧ ಭಯೋತ್ಪಾದಕರ ರೀತಿಯಲ್ಲಿ ಬಾಡಿ ವಾರೆಂಟ್ ತಂದು ಮತ್ತೆ ಸೆರೆಮನೆಗೆ ತಳ್ಳಿರುವುದು ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಕಗ್ಗೊಲೆ ರಾಷ್ಟ್ರದಲ್ಲಿ ಮುಂದುವರಿಯುತ್ತಿರುವುದು ಸ್ಪಷ್ಟವಾಗಿ ಸಾಬೀತಾಗುತ್ತಿದೆ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net