ನೇಪಾಳದಲ್ಲಿ ಹಿಂಸಾಚಾರ: ಮನೆಗೆ ನುಗ್ಗಿ ಮಾಜಿ ಪ್ರಧಾನಿ ದೇವುಬಾ ಮತ್ತು ಪತ್ನಿ ಮೇಲೆ ಹಲ್ಲೆ; ಸ್ಥಳಕ್ಕಾಗಮಿಸಿ ಕಾಪಾಡಿದ ಸೇನೆ | Ex Nepal PM

EX PM Nepal
Published on

Ex Nepal PM: ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ನಿಷೇಧ, ಭ್ರಷ್ಟಾಚಾರ ವಿರೋಧಿಸಿ ಎರಡನೇ ದಿನವೂ ಮುಂದುವರಿದ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ದೇಶದ ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಮೆನೆಗ ನುಗ್ಗಿ ಅವರು ಮತ್ತು ಅವರ ಪತ್ನಿ ವಿದೇಶಾಂಗ ಸಚಿವೆ ಅರ್ಜು ರಾಣಾ ದೇವುಬಾ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ. ತಕ್ಷಣಾ ಸ್ಥಳಕ್ಕಾಗಮಿಸಿ ಸೇನೆ ಅವರನ್ನು ಕಾಪಾಡಿದೆ.

ಪ್ರತಿಭಟನಾಕಾರರು ಕಠ್ಮಂಡುವಿನ ಬುಡನಿಲ್ಕಾಂತದಲ್ಲಿರುವ ದೇವುಬಾ ಅವರ ನಿವಾಸಕ್ಕೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ದಾಳಿಯ ನಂತರ ಮಾಜಿ ಪ್ರಧಾನಿಯ ಮುಖದಿಂದ ರಕ್ತಸ್ರಾವವಾಗುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ.

ಜನರಲ್ ಝೆಡ್ ಪ್ರತಿಭಟನಾಕಾರರ 2ನೇ ದಿನ ಅವರ ಕೋಪಕ್ಕೆ ಬಲಿಯಾಗಿದ್ದು, ರಾಜಕೀಯ ನಾಯಕರ ನಿವಾಸಗಳು, ಸಂಪುಟ ಸಚಿವರು ಮತ್ತು ಅಧಿಕೃತ ಕಟ್ಟಡಗಳು. ಯುವಕರು ಕೋಪಗೊಂಡು ಮನೆಗಳಿಗೆ ಬೆಂಕಿ ಹಚ್ಚಿದರು. ಪಕ್ಷದ ಕಚೇರಿಗಳು ಮತ್ತು ಪೊಲೀಸ್ ಠಾಣೆಗಳನ್ನು ಸಹ ಸುಟ್ಟುಹಾಕಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ 65 ವರ್ಷದ ನೇಪಾಳ ಹಣಕಾಸು ಮಂತ್ರಿ ಬಿಷ್ಣು ಪ್ರಸಾದ್ ಪೌಡೆಲ್, ಕಠ್ಮಂಡುವಿನ ಬೀದಿಗಳಲ್ಲಿ ಓಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅವರ ಹಿಂದೆ ಸಾವಿರಾರು ಜನ ಅಟ್ಟಾಡಿಸಿಕೊಂಡು ಹೋಗುತ್ತಿದ್ದಾರೆ. ಎದುರು ದಿಕ್ಕಿನಿಂದ ಬಂದ ಯುವ ಪ್ರತಿಭಟನಾಕಾರನೊಬ್ಬ ಸಚಿವರನ್ನು ಹಾರಿ ಒದ್ದು ಕೆಳಕ್ಕೆ ತಳ್ಳುತ್ತಾನೆ. ಸಮತೋಲನ ತಪ್ಪಿ ಪೌಡೆಲ್​ ಅವರು ಕೆಂಪು ಗೋಡೆಗೆ ಡಿಕ್ಕಿ ಹೊಡೆದಿದ್ದು, ಅಲ್ಲಿಂದ ಮತ್ತೆ ಎದ್ದು ರಸ್ತೆಯಲ್ಲಿ ಓಡುವುದು ವಿಡಿಯೋದಲ್ಲಿ ದಾಖಲಾಗಿದೆ.

ಸಾಮಾಜಿಕ ಮಾಧ್ಯಮಗಳ ಮೇಲಿನ ದೇಶಾದ್ಯಂತ ನಿಷೇಧದ ನಂತರ ಭುಗಿಲೆದ್ದ ಪ್ರತಿಭಟನೆಯಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ತೀವ್ರ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ನಿಷೇಧವನ್ನು ಹಿಂತೆಗೆದುಕೊಂಡರು. ವಿರೋಧ ಜಾಸ್ತಿಯಾಗುತ್ತಿದ್ದಂತೆ ಇಂದು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net