'ಛಾವಾ' ಚಿತ್ರದಲ್ಲಿ ಹಿಂದುಗಳ ಮೇಲಿನ ಹಿಂಸೆ ಭಾಗಶಃ ಕಾಲ್ಪನಿಕವಾಗಿದೆ; ನಟಿ ಸ್ವರಾ ಭಾಸ್ಕರ್​ ವಿರುದ್ಧ ಕಿಡಿ | Swara Bhaskar

dk - 2025-02-19T155923.744
Published on

Swara Bhaskar:ಛಾವಾ ಸಿನಿಮಾದಲ್ಲಿ ಹಿಂದುಗಳ ಮೇಲಿನ ಹಿಂಸೆ ಕ್ರೂರವಾಗ ಚಿತ್ರೀಕರಿಸಿದ್ದು, ಇದು ಭಾಗಶ ಕಾಲ್ಪನಿಕವಾಗಿದೆ ಎಂದು ನಟಿ ಸ್ವರಾ ಭಾಸ್ಕರ್​ ಟ್ವೀಟ್​ಮಾಡಿದ್ದು, ನಟಿಯ ವರ್ತನೆ ಹಲವರು ಕಿಡಿಕಾಡಿದ್ದಾರೆ.

ಇವರ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಹಲವರು 'ಭಾರತೀಯ ಭಾವನೆಗಳನ್ನು ಅಮಾನಿಸಲಾಗಿದೆ' ಎಂದು ನಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಸ್ವರಭಾಸ್ಕರ್​, "500 ವರ್ಷಗಳ ಹಿಂದೆ ಹಿಂದುಗಳ ಮೇಲೆ ನಡೆದ ಕಾಲ್ತುಳಿತ ಮತ್ತು ದುರುಪಯೋಗದಿಂದ ಉಂಟಾದ ಭೀಕರ ಸಾವು, ನಂತರ ಶವಗಳ ಜೆಸಿಬಿ ಬುಲ್ಡೋಜರ್ ನಿರ್ವಹಣೆಯಿಂದ ಉಂಟಾದ ಭೀಕರ ಸಾವುಗಿಂತ ಹೆಚ್ಚು ಸುಂದರವಾಗಿ ಭಾಗಶಃ ಕಾಲ್ಪನಿಕ ಚಲನಚಿತ್ರವಾಗಿದೆ. ಈ ಚಿತ್ರಹಿಂಸೆಯಿಂದ ಕೋಪಗೊಂಡ ಸಮಾಜವು ಮೆದುಳು ಮತ್ತು ಆತ್ಮ-ಸತ್ತ ಸಮಾಜವಾಗಿದೆ'' ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಪತ್ರಕರ್ತೆ ಸ್ವಾತಿ ಚತುರ್ವೇದಿ ಪ್ರತಿಕ್ರಿಯಿಸಿದ್ದು, “ಈ ಟ್ವೀಟ್ ಅನ್ನು ಮತ್ತೊಮ್ಮೆ ಯೋಚಿಸಿ ಸ್ವರಾ, ನಾನು ದೆಹಲಿ ವಿಶ್ವವಿದ್ಯಾಲಯದ ಇತಿಹಾಸದ ವಿದ್ಯಾರ್ಥಿನಿ ಮತ್ತು ಸಂಭಾಜಿ ಮಹಾರಾಜ್ ಅವರನ್ನು ಕೊಲ್ಲುವ ಮೊದಲು ಔರಂಗಜೇಬ್ ನೀಡಿದ ಚಿತ್ರಹಿಂಸೆಯ ಬಗ್ಗೆ ಯಾವುದೇ ಕಾಲ್ಪನಿಕವಲ್ಲ. ದಯವಿಟ್ಟು ನಮ್ಮ ಇತಿಹಾಸದೊಂದಿಗೆ ಆಟವಾಡಬೇಡಿ. ಒಂದು ಆಕ್ರೋಶವು ಇನ್ನೊಂದನ್ನು ತಡೆಯುವುದಿಲ್ಲ.'' ಎಂದಿದ್ದಾರೆ. ಇದಲ್ಲದೆ ನೆಟಿಜನ್​ ತರಹೇವಾರಿ ಕಾಮೆಂಟ್​ಗಳ ಮೂಲಕ ಕಿಡಿಕಾರಿದ್ದಾರೆ.

ಲಕ್ಷ್ಮಣ್​ ಉಟೆಕಾರ್​ ನಿರ್ದೇಶನದ ಮತ್ತು ಮ್ಯಾಡಕ್​ ಫಿಲ್ಮಸ್​ ಅಡಿಯಲ್ಲಿ ನಿರ್ಮಾಣವಾದ ಹಿಂದಿ ಸಿನಿಮಾ ಛಾವಾ. ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮಹಾರಾಜರ ಹಿರಿಯ ಮಗ ಮರಾಠ ರಾಜ ಸಂಭಾಜಿ ಅವರ ಜೀವನಧಾರಿತ ಆ್ಯಕ್ಷನ್​ ಚಿತ್ರವಾಗಿದೆ.

ಇನ್ನು ಸಂಭಾಜಿ ಪಾತ್ರವನ್ನು ನಟ ವಿಕ್ಕಿ ಕೌಶಲ್ ನಿರ್ವಹಿಸಿದ್ದಾರೆ. ರಶ್ಮಿಕಾ ಮಂದಣ್ಣ ಯೇಸುಬಾಯಿ ಪಾತ್ರದಲ್ಲಿ ಮಿಂಚಿದ್ದಾರೆ. ಮತ್ತು ಔರಂಗ್​ಜೇಬ್​​ ಪಾತ್ರದಲ್ಲಿ ಅಕ್ಷಯ್​ ಖನ್ನ ಮಾಡಿದ್ದಾರೆ. ಇದನ್ನ ಶಿವಾಜಿ ಸವಾಂತ್​ ಅವರ ಮರಾಠ ಕಾಂದಬರಿ ಛಾವಾದಿಂದ ಕಥೆಯನ್ನು ತೆಗೆದುಕೊಳ್ಳಲಾಗಿದೆ. ಈ ಸಿನಿಮಾ ಇದೀಗ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net