

ಹುಬ್ಬಳ್ಳಿ: ನಗರದಲ್ಲಿ ಪುಂಡರ ಹಾವಳಿ ಮಿತಿಮೀರುತ್ತಿದೆ. ಇಂದು ಮುಸ್ಸಂಜೆ ಹೊತ್ತಲ್ಲಿ ಸುಮಾರು 10 ಜನರ ಗುಂಪೊಂದು ಮನೆಯೊಂದಕ್ಕೆ ನುಗ್ಗಿ ಸಿಕ್ಕಾಪಟೆ ದಾಂಧಲೆ ನಡೆಸಿದ್ದಾರೆ.
ಗೋಕುಲ್ ರಸ್ತೆಯ ಗಿರಿನಗರದಲ್ಲಿರುವ ವಿನಯ್ ದೇಸಾಯಿ ಅವರ ಮನೆಗೆ ನುಗ್ಗಿದ ಈ ಗುಂಪು ಮಹಿಳೆಯರಿಗೆ ಥಳಿಸಿದ್ದಲ್ಲದೆ, ಬೈಕ್ಗಳಿಗೆ ಬೆಂಕಿ ಹಚ್ಚಿದೆ.
ಈ ದುಷ್ಕರ್ಮಿಗಳು ಮೋಟರ್ಬೈಕ್ ಕಳ್ಳತನಕ್ಕೆ ಬಂದಿದ್ದವರು. ಶಬ್ದ ಕೇಳಿ ಹೊರಬಂದ ವಿನಯ್ ಮತ್ತು ಮನೆಯವರ ಮೇಲೆ ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ವಿನಯ್ ಮತ್ತು ಅವರ ಅಕ್ಕನಿಗೆ ಗಂಭೀರ ಗಾಯಗಳಾಗಿದ್ದು ಕಿಮ್ಸ್ಗೆ ದಾಖಲಾಗಿದೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)