ನೀತಿ ಸಂಹಿತೆ ಉಲ್ಲಂಘನೆ; 406.73 ಕೋಟಿ ರೂ. ಮೌಲ್ಯದ ವಸ್ತು ವಶ

ECI
Published on

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಭಾನುವಾರ 3.27 ಕೋಟಿ ರೂ.ನಗದು ಸೇರಿದಂತೆ ಈವರೆಗೆ ಒಟ್ಟು 406.73 ಕೋಟಿ ರೂ. ವಸ್ತುಗಳನ್ನು ವಶಕ್ಕೆ ಪಡೆದಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದಂದಿನಿಂದ ಈವರೆಗೆ 78.75 ಕೋಟಿ ರೂ. ನಗದು, 177.39 ಕೋಟಿ ಮೌಲ್ಯದ ಮದ್ಯ, 11.24 ಕೊಟಿ ಬೆಲೆಯ ಡ್ರಗ್ಸ್, 57.67 ಕೋಟಿ ಬೆಲೆಯ ಚಿನ್ನ, 1.18 ಕೋಟಿ ಮೌಲ್ಯದ ಬೆಳ್ಳಿ, 0.09 ಕೋಟಿ ರೂ. ಬೆಲೆಯ ವಜ್ರ, 8.14 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆ, 72.14 ಕೋಟಿ ಮೌಲ್ಯದ ಇತರೆ ವಸ್ತುಗಳನ್ನು ಚುನಾವಣಾ ಆಯೋಗದ ವಿವಿಧ ಜಾಗೃತ ದಳಗಳು ಮುಟ್ಟುಗೋಲು ಹಾಕಿಕೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net