ನೀತಿ ಸಂಹಿತೆ ಉಲ್ಲಂಘನೆ; 402 ಕೋಟಿ ಮೌಲ್ಯದ ವಸ್ತು ವಶ

cash_seizure_750x500
Published on

ಬೆಂಗಳೂರು: ಚುನಾವಣಾ ಅಕ್ರಮಗಳ ಮೇಲೆ ತೀವ್ರ ನಿಗಾ ಇಟ್ಟಿರುವ ಚುನಾವಣಾ ಆಯೋಗ ಈವರೆಗೆ ನಗದು ಸೇರಿದಂತೆ 402.39 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಈವರೆಗೆ ಒಟ್ಟು 74.31 ಕೋಟಿ ರೂ. ನಗದು, 177.01 ಕೋಟಿ ಬೆಲೆಯ ಮದ್ಯ, 10.73 ಕೋಟಿ ಮೌಲ್ಯದ ಡ್ರಗ್ಸ್, 57.67 ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ, 1.18 ಕೋಟಿ ರೂ.ಮೌಲ್ಯದ ಬೆಳ್ಳಿ ಮತ್ತು ಬೆಳ್ಳಿ ಆಭರಣ, 0.09 ಕೋಟಿ ಬೆಲೆಯ ವಜ್ರ, 8.13 ಕೋಟಿ ರೂ. ಬೆಲೆಯ ಉಚಿತ ಉಡುಗೊರೆ, 72.27 ಕೋಟಿ ಮೌಲ್ಯದ ಇತರೆ ವಸ್ತುಗಳನ್ನು ಜ್ತು ಮಾಡಲಾಗಿದೆ.

ಪೊಲೀಸ್, ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಅಬಕಾರಿ, ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.

ಕ್ಷಿಪ್ರಪಡೆ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 1,937 ಎ್ಐಆರ್ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net