

ಬೆಂಗಳೂರು: ಮನುಷ್ಯ ಬಿಟ್ಟು ಎದ್ದು ಹೋಗಬೇಕಾಗುತ್ತದೆ. ಆದರೆ ಅದಕ್ಕೆ ವಯಸ್ಸು ಅನ್ನೋದಿದೆ. 70-80 ವರ್ಷ ಅಂತ ಇದೆ. ಆದರೆ ಈಗ ಸಮಯ ವಯಸ್ಸು ಯಾವುದು ಇಲ್ಲ ಎಂದು ನಟ ವಿನೋದ್ ರಾಜ್ ಭಾವುಕರಾದರು.
ವಿಜಯ್ -ಸ್ಪಂದನಾ ಹೇಳಿ ಮಾಡಿಸಿದ ಜೋಡಿ ಅದು. ಅವರ ಪ್ರೀತಿಯನ್ನು ಬಿಟ್ಟು ಹೋಗಿದ್ದಾರೆ. ನಾನು ಇರಲಿ ಇರದಿರಲಿ ಆದರೆ ಪ್ರೀತಿ ಇರುತ್ತೆ ಅಂತ ಹೇಳಿದ್ದಾರೆ ಈ ದುಃಖವನ್ನು ಭರಿಸುವ ಶಕ್ತಿ ಕುಟುಂಬಕ್ಕೆ ದೇವರು ನೀಡಲಿ ಎಂದು ವಿನೋದ್ ರಾಜ್ ಪ್ರಾರ್ಥಿಸಿದರು.
ಸ್ಪಂದನಾ ಅವರ ಅಂತಿಮ ಯಾತ್ರೆ 2 ಗಂಟೆಗೆ ಪ್ರಾರಂಭವಾಗಲಿದೆ. ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್ ನಲ್ಲಿ ಮಾಡುತ್ತೇವೆ. ಪಾರ್ಥಿವ ಶರೀರ 2 ಗಂಟೆ ತನಕ ಇಲ್ಲೇ ಇರುತ್ತದೆ. ಮಧ್ಯಾಹ್ನ ನಂತರ ಅಂತಿಮ ಸಂಸ್ಕಾರ ಮಾಡುತ್ತೇವೆ ಎಂದು ಭಾವುಕರಾದ ಬಿಕೆ ಹರಿಪ್ರಸಾದ್ ತಿಳಿಸಿದರು.
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನ ಹಿನ್ನೆಲೆಯಲ್ಲಿ ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ನಡೆಯುತ್ತಿದೆ. ಮಧ್ಯಾಹ್ನ 2 ಗಂಟೆಯವರೆಗೂ ಮಲ್ಲೇಶ್ವರದಲ್ಲಿರುವ ಬಿ.ಕೆ. ಶಿವರಾಂ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರಲಿದೆ. ಸುಮಾರು 4 ಗಂಟೆಗೆ ಸ್ಪಂದನ ಅವರ ಅಂತ್ಯಕ್ರಿಯೆ ನಡೆಯಲಿದೆ. ಬರ್ನಿಂಗ್ ಮೂಲಕ ಸ್ಪಂದನ ಅಂತ್ಯಕ್ರಿಯೆಗೆ ಕುಟುಂಬಸ್ಥರು ತೀರ್ಮಾನ ಮಾಡಿದ್ದಾರೆ.
ಸ್ಪಂದನಾ ಅಂತ್ಯಸಂಸ್ಕಾರದ ಹಿನ್ನೆಲೆಯಲ್ಲಿ ಹರಿಶ್ಚಂದ್ರ ಘಾಟ್ ನಲ್ಲಿ ಬಿಬಿಎಂಪಿ ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಹದಿನೈದು ಪೌರ ಕಾರ್ಮಿಕರಿಂದ ಕ್ಲಿನಿಂಗ್ ಕಾರ್ಯ ನಡೆಯುತ್ತಿದೆ.