VIDEO | ಕೃಷಿ ಭೂಮಿಯಿಂದ ಆದಾಯ ಹೆಚ್ಚಳ ಹೇಗೆ?; ವಿನೋದ್​ ರಾಜ್ ಕೊಟ್ಟ ಸರಳ ಸಲಹೆ ಹೀಗಿದೆ

ವಿಜಯವಾಣಿ (2)
Published on

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ಉಂಟಾದ ವ್ಯತ್ಯಾಸದ ಬೆನ್ನಲ್ಲೇ ನಟಿಯ ಯೋಗಕ್ಷೇಮ ವಿಚಾರಿಸಿದ ವಿಜಯವಾಣಿ ತಂಡ, ಅವರ ಪುತ್ರ ನಟ ವಿನೋದ್​ ರಾಜ್​ ಅವರೊಂದಿಗೆ ಕೆಲ ಕಾಲ ಸಂದರ್ಶನ ನಡೆಸಿತು. ಈ ವೇಳೆ ವಿನೋದ್​ ಕೃಷಿ ಭೂಮಿಯಿಂದ ಆದಾಯ ತೆಗೆಯುವುದು ಹೇಗೆ ಎಂಬುದರ ಬಗ್ಗೆ ಇಂದಿನ ಯುವಕರಿಗೆ ಸರಳ ಸಲಹೆಗಳನ್ನು ನೀಡಿದ್ದಾರೆ.

ನಮ್ಮಲ್ಲಿ ಸುಮ್ಮನೆ ಒಂದು ಜಾಗ ಖರೀದಿ ಮಾಡಿ, ಬೇರೆಯವರಿಂದ ಕೆಲಸ ಮಾಡಿಸುವುದಲ್ಲ. ಅದು ಕೃಷಿಯಾವುವುದಿಲ್ಲ. ಆ ರೀತಿ ಮಾಡಿದ್ರೆ, ನಿಮಗೆ ತಿಳಿಯುವುದು ಯಾವಾಗ? ವ್ಯವಸಾಯ ಏನು ಎಂಬುದು ಅರಿಯಬೇಕು ಎಂದ ವಿನೋದ್​ ಅವರು, ನಿಮ್ಮ ಸುತ್ತ ಜನರನ್ನು ಇಟ್ಟುಕೊಂಡು ಭತ್ತ ಬೆಳೆಯುವುದಲ್ಲ ಕೃಷಿ ಅಂದ್ರೆ, ಎಲ್ಲವೂ ಗೊತ್ತಿರಬೇಕು. ನನಗೆ ಗಿಡಗಳ ಹೆಸರು, ಅದಕ್ಕೆ ಔಷಧಿ, ಖಾಯಿಲೆ ಎಲ್ಲವನ್ನೂ ಅಮ್ಮನೇ ನನಗೆ ತಿಳಿಸಿದ್ದು, ಹೇಳಿಕೊಟ್ಟಿದ್ದು ಎಂದರು.

ನಾನು ಇಷ್ಟು ದೂರ ಬಂದು ಇರುವುದಕ್ಕೆ ಅಮ್ಮನೇ ಕಾರಣ. ನಿನಗೆ ಪ್ರಕೃತಿಯ ಅರಿವಾಗಬೇಕು, ವ್ಯವಸಾಯ ಅನ್ನೋದು ಏನು ಎಂಬುದು ತಿಳಿಯಬೇಕು. ನೀನೊಬ್ಬ ರೈತನಾಗಲು ಅರ್ಹತೆ ಮತ್ತು ಯೋಗ್ಯತೆ ಇರಬೇಕು ಎಂದು ತಾಯಿ ಹೇಳಿದ್ರು. ಏನು ಆ ಅರ್ಹತೆ ಅಂದ್ರೆ.... ಹೆಚ್ಚಿನ ವಿಷಯ ತಿಳಿಯಲು ಕೆಳಗಿನ ಸಂದರ್ಶನ ವಿಡಿಯೋ ಕ್ಲಿಕ್ ಮಾಡಿ, ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net