ವಿಕಾಸ್​ ದುಬೆಯ ಇನ್ನೋರ್ವ ಸಹಚರ ಮಹಾರಾಷ್ಟ್ರದಲ್ಲಿ ಅರೆಸ್ಟ್​...

Aide
Published on

ಮುಂಬೈ: ಎಂಟು ಪೊಲೀಸರ ಹತ್ಯೆಗೆ ಕಾರಣನಾಗಿದ್ದ ವಿಕಾಸ್​ ದುಬೆಯನ್ನೂ ನಿನ್ನೆ ಉತ್ತರ ಪ್ರದೇಶ ಪೊಲೀಸರು ಎನ್​ಕೌಂಟರ್​​ನಲ್ಲಿ ಕೊಂದಿದ್ದಾರೆ. ದುಬೆಯ ಅಂತ್ಯಕ್ರಿಯೆಯೂ ಆಗಿದೆ.

ಅದರ ಬೆನ್ನಲ್ಲೇ ಇಂದು ವಿಕಾಸ್​ ದುಬೆಯ ಇನ್ನೋರ್ವ ಸಹಚರನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಕಾನ್ಪುರದಲ್ಲಿ ನಡೆದ ಪೊಲೀಸರ ಹತ್ಯೆ ಪ್ರಕರಣದಲ್ಲಿ ಈತನೂ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ದುಬೆ ಸಹಚರ ಅರವಿಂದ್​ ಅಕಾ ಗುಡ್ಡನ್​ ತ್ರಿವೇದಿ ಹಾಗೂ ಅವನ ಚಾಲಕ ಸೋನು ತಿವಾರಿ ಇಬ್ಬರೂ ಥಾಣೆಯ ಸುತ್ತಲಿನ ಪ್ರದೇಶದಲ್ಲಿಯೇ ಅಡಗಿದ್ದಾರೆ ಎಂಬ ನಿಖರ ಮಾಹಿತಿ ಮೇರೆಗೆ ಜುಹು ಭಯೋತ್ಪಾದನಾ ನಿಗ್ರಹ ದಳ, ಅವರ ಪತ್ತೆ ಕಾರ್ಯಾಚರಣೆ ನಡೆಸಿತ್ತು. ಇದನ್ನೂ ಓದಿ: ‘ನಾನು ಕೊವಿಡ್​-19 ತಪಾಸಣೆ ಮಾಡಿಸಿಕೊಂಡೆ…ನೀವೂ ತಪ್ಪದೆ ಟೆಸ್ಟ್​ಗೆ ಒಳಗಾಗಿ!’

ಗುಡ್ಡನ್​ ದುಬೆಯೊಂದಿಗೆ ಸೇರಿ ಹಲವು ಕ್ರೈಂಗಳಲ್ಲಿ ಭಾಗಿಯಾಗಿದ್ದ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲೇ ಗೊತ್ತಾಗಿದೆ. 2001ರಲ್ಲಿ ನಡೆದ ಉತ್ತರ ಪ್ರದೇಶ ಸಚಿವ ಸಂತೋಷ್​ ಶುಕ್ಲಾ ಅವರ ಹತ್ಯೆಯಲ್ಲೂ ಈತನ ಕೈವಾಡ ಇತ್ತು ಎಂದು ವರದಿಯಾಗಿದೆ.

ಗುಡ್ಡನ್​ನನ್ನು ಬಂಧಿಸಿದ ಎಟಿಎಸ್​ಗೆ ಉತ್ತರ ಪ್ರದೇಶ ಸರ್ಕಾರ ಬಹುಮಾನವನ್ನೂ ಘೋಷಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net