ಜಲಪಾತಕ್ಕೆ ವಿಜಯ್ ಹಾಡು; ರಮೇಶ್ ಬೇಗಾರ್ ನಿರ್ದೇಶನದ ಪರಿಸರ ಪ್ರೇಮದ ಚಿತ್ರ

jalapata
Published on

ಬೆಂಗಳೂರು: ‘ವೈಶಂಪಾಯನ ತೀರ’ ಸಿನಿಮಾ ಮೂಲಕ ನಿರ್ದೇಶಕರ ಕ್ಯಾಪ್ ಧರಿಸಿದ ರಮೇಶ್ ಬೇಗಾರ್ ಅವರ ಎರಡನೇ ಚಿತ್ರ ‘ಜಲಪಾತ’. ಇದೊಂದು ಮಲೆನಾಡಿನ ಪರಿಸರದಲ್ಲಿ ನಡೆಯುವ ಕಥೆಯಾಗಿದ್ದು, ಪರಿಸರ ಕಾಳಜಿ ಮತ್ತು ಅರಿವನ್ನು ಮೂಡಿಸುವ ವಿಭಿನ್ನ ಕಥಾವಸ್ತು ಹೊಂದಿದೆ. ಮಲೆನಾಡ ಭಾಷೆ , ಸಂಸ್ಕೃತಿ ಮತ್ತು ಅಲ್ಲಿನ ವಾತಾವರಣವನ್ನು ಪೂರ್ಣವಾಗಿ ಚಿತ್ರದಲ್ಲಿ ತೋರಿಸಲಾಗಿದೆ ಎನ್ನಲಾಗಿದೆ.

ನಾಯಕಿಯಾಗಿ ನಾಗಶ್ರೀ ಬೇಗಾರ್ ಬಣ್ಣ ಹಚ್ಚಿದ್ದು, ಇತ್ತೀಚೆಗಷ್ಟೆ ಚಿತ್ರದ ಮೊದಲ ನೋಟವನ್ನು ಬಿಡುಗಡೆ ಮಾಡಲಾಗಿತ್ತು. ಇನ್ನು ಇವರಿಗೆ ಜೋಡಿಯಾಗಿ ‘ಪದವಿಪೂರ್ವ’ ಸಿನಿಮಾ ಖ್ಯಾತಿಯ ರಜನೀಶ್ ನಾಯಕರಾಗಿದ್ದಾರೆ. ಈಗ ಈ ಚಿತ್ರದ ಹಾಡೊಂದನ್ನು ಹಾಡುವ ಮೂಲಕ ವಿಜಯ್‌ಪ್ರಕಾಶ್ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ‘ಎದೆಯ ದನಿಯ ಹಾಡು ಕೇಳು..’ ಎಂದು ಸಾಗುವ ಗೀತೆಗೆ ರಮೇಶ್ ಬೇಗಾರ್ ಸಾಹಿತ್ಯ ಬರೆದಿದ್ದು, ಸಾದ್ವಿನಿ ಕೊಪ್ಪ ಸಂಗೀತ ಸಂಯೋಜಿಸಿದ್ದಾರೆ.

ಇನ್ನು, ಪ್ರಮೋದ್ ಶೆಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರೇಖಾ, ರವಿಕುಮಾರ್, ನಯನ, ಪ್ರಶಾಂತ್, ನಟರಾಜ್, ಅಭಿಷೇಕ್ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಶಶೀರ ಛಾಯಾಗ್ರಹಣ, ಅವಿನಾಶ್ ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net