ಬಳ್ಳಾರಿ ಸೆಂಟ್ರಲ್ ಜೈಲಲ್ಲಿ ದರ್ಶನ್​: ಪತಿ ನೋಡಲು 2 ಬ್ಯಾಗ್ ಹಿಡಿದುಬಂದ ವಿಜಯಲಕ್ಷ್ಮಿ

ವಿಜಯವಾಣಿ (74)
Published on

ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್​ ಆದ ರೇಣುಕಸ್ವಾಮಿ ಕೊಲೆ ಆರೋಪಿ ನಟ ದರ್ಶನ್, ಕಳೆದ ಮೂರು ದಿನಗಳಿಂದ ಬಳ್ಳಾರಿ ಸೆರೆವಾಸದಲ್ಲಿದ್ದಾರೆ. ಇದೀಗ ಪತಿಯ ಆರೋಗ್ಯ ವಿಚಾರಿಸಲು ವಕೀಲರು ಮತ್ತು ಪುತ್ರ ವಿನೀಶ್​ ಜತೆ ಆಗಮಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪೊಲೀಸ್ ಅಧಿಕಾರಿಗಳ ಅನುಮತಿಯೊಂದಿಗೆ ಜೈಲಿನೊಳಗೆ ಪ್ರವೇಶ ಪಡೆದಿದ್ದಾರೆ.

ದರ್ಶನ್ ಭೇಟಿಯ ಜತೆ ಕಾನೂನು ಹೋರಾಟದ ಬಗ್ಗೆಯೂ ಚರ್ಚೆ ನಡೆಸಲಿರುವ ಪತ್ನಿ ವಿಜಯಲಕ್ಷ್ಮಿ, ಎರಡು ಬ್ಯಾಗ್ ಹಿಡಿದು ಬಂದಿದ್ದಾರೆ. ಎರಡು ಮೂರು ಬಟ್ಟೆಯ ಬ್ಯಾಗ್ ಮತ್ತು ಔಷಧಿ, ಹಣ್ಣು-ಹಂಪಲು ಇರುವ ಮತ್ತೊಂದು ಬ್ಯಾಗ್ ಇದೆ.

ಸೆಕ್ಯೂರಿಟಿ ಕೊಠಡಿಯಲ್ಲಿ ಬ್ಯಾಗ್ ಚೆಕಿಂಗ್ ಬಳಿಕ ದರ್ಶನ್ ಉಳಿದಿರುವ ಸೆಲ್​ಗೆ ಪತ್ನಿ ತೆರಳಿದ್ದಾರೆ. ನ್ಯಾಯಾಲಯದ ಒಂದಷ್ಟು ದಾಖಲೆ ಪತ್ರಗಳನ್ನು ತಮ್ಮೊಂದಿಗೆ ತಂದಿರುವ ವಿಜಯಲಕ್ಷ್ಮಿ, ದರ್ಶನ್​ರ ಬಿಡುಗಡೆಗ ಕುರಿತು ವಕೀಲರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net