ವಿಜಯೇಂದ್ರ ರಾಜೀನಾಮೆ ಕೊಡಲಿ; ಸಚಿವ ಈಶ್ವರ ಖಂಡ್ರೆ ಆಗ್ರಹ

Eshwara khandre
Published on

ಬೆಂಗಳೂರು: ಮುಡಾ ಪ್ರಕರಣ ಪೂರ್ವ ನಿಯೋಜಿತ. ಇದೊಂದು ಬಿಜೆಪಿ-ಜೆಡಿಎಸ್ ಸಂಚು. ಅವರ ಕುತಂತ್ರ ನಮ್ಮ ಮುಂದೆ ನಡೆಯೋದಿಲ್ಲ. ನಾವು 136 ಶಾಸಕರು ಒಗ್ಗಟ್ಟಾಗಿ ಇದ್ದೇವೆ. ಸಿದ್ದರಾಮಯ್ಯಗೆ ನಾವೆಲ್ಲ ಬಂಡೆಯಂತೆ ಜತೆಗೆ ಇರುತ್ತೇವೆ. ಸರ್ಕಾರ ಸುಭದ್ರವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಕೆಪಿಸಿಸಿಯಲ್ಲಿ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕತೆ ವಿಜಯೇಂದ್ರರಿಗೆ ಇಲ್ಲ. ವಿಜಯೇಂದ್ರ ರಾಜೀನಾಮೆ ಯಾವಾಗ ಎಂದು ವಿಜಯಪುರ ಭಾಗದವರು ಕೇಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಮೊದಲು ರಾಜೀನಾಮೆ ನೀಡಬೇಕು ಎಂದರು.
ಶಾಸಕ ಮುನಿರತ್ನ, ಆರ್.ಅಶೋಕ, ಯಡಿಯೂರಪ್ಪ, ಸಿ.ಟಿ ರವಿ, ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮೇಲೆ ಆರೋಪ ಇದೆ. ಅವರ ರಾಜೀನಾಮೆ ಪಡೆದಿದ್ದಾರಾ? ಯತ್ನಾಳ್ ತಮ್ಮ ಕುಟುಂಬದ ಬಗ್ಗೆ ಏನೋನೋ ಮಾತಾಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಧೈರ್ಯ ಇದೆಯೋ? ಎಂದು ಪ್ರಶ್ನಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net