ವಿಜಯವಾಣಿ ಜನಮತ: ಜನರೇ ಜಾಗೃತರಾಗಿ

Lockdown
Published on

‘ವಿಜಯವಾಣಿ’ಯಲ್ಲಿ ಪ್ರಕಟವಾದ (ಮಾರ್ಚ್ 27) ಉಡುಪಿ ಜಿಲ್ಲೆಯ ಬೆಳ್ಮಣ್​ದಲ್ಲಿ ಕಣ್ಣೀರು ಹಾಕಿದ ಪೊಲೀಸ್ ಸಿಬ್ಬಂದಿಯ ಚಿತ್ರ ಮತ್ತು ಸುದ್ದಿ ಮನಕಲಕುವ ಸಂಗತಿ. ಮನುಷ್ಯತ್ವ, ಮಾನವೀಯತೆಯನ್ನು ಮೈಗೂಡಿಸಿಕೊಂಡು ಸಮಾಜದ ಸ್ವಾಸ್ಥ್ಯನ್ನು ಕಾಪಾಡುವ ಉದಾತ್ತ ಧ್ಯೇಯವನ್ನು ಪ್ರದರ್ಶಿಸುವ ಇಂತಹವರ ಸಂತತಿ ಹೆಚ್ಚಲಿ. ಆಗ ದೇಶಕ್ಕೆ ಕ್ಷೇಮ. ಒಬ್ಬ ಪೊಲೀಸ್​ಪೇದೆಯ ಕಾಳಜಿ ಕೆಲವು ಜನಸಾಮಾನ್ಯರಿಗೆ ಅರ್ಥವಾಗದೆ ಲಾಕ್​ಡೌನ್ ಇದ್ದರೂ ಬೇಕಾಬಿಟ್ಟಿ ಬೀದಿಯಲ್ಲಿ ತಿರುಗುವುದು ಕೆಲವರಿಗೆ ಮೋಜಾಗಿದೆ.

ಒಂದು ಕಡೆ ವಿಶಾಲ ಮನೋಭಾವದ ಸಾಮಾಜಿಕ ಕಳಕಳಿಯ ಪೊಲೀಸ್ ಮತ್ತೊಂದೆಡೆ ಕಾನೂನು ಉಲ್ಲಂಘಿಸುವ ವ್ಯಕ್ತಿಗಳು. ಇಂತಹ ಬೇಜವಾಬ್ದಾರಿ ವ್ಯಕ್ತಿಗಳೇ ಕರೊನಾ ಮಾರಿಯ ಸಂಹಾರಕ್ಕೆ ದೊಡ್ಡ ಕಂಟಕರು. ಕಾನೂನು ಉಲ್ಲಂಘಿಸುವ ವ್ಯಕ್ತಿಗಳಿಗೆ ಕಠಿಣ ದಂಡ ವಿಧಿಸಿ ಶಿಕ್ಷೆಗೆ ಒಳಪಡಿಸಬೇಕು. ತನ್ನ ಸ್ವಾಸ್ಥ್ಯ ಕುಟುಂಬದ ಸ್ವಾಸ್ಥ್ಯ ಹಾಗೂ ಸಮಾಜದ ಸ್ವಾಸ್ಥ್ಯ ಎಂಬ ಅರಿವು ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯ ಎಂಬುದು ನೆನಪಿನಲ್ಲಿರಲಿ.

| ಕೆ.ವಿ.ಸೀತಾರಾಮ್ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net