

1947ರ ದೇಶ ವಿಭಜನೆಗೆ ಮುನ್ನ ಪಂಜಾಬ್ನ ಸನೌರ್ ವಿಧಾನಸಭೆ ಕ್ಷೇತ್ರದ ಅಸರ್ಪುರ ಗ್ರಾಮದ ನಿವಾಸಿ ನಿಶಾಂತ್ ಸಿಂಗ್ ಅವರ ಅಜ್ಜ ಪಾಲಾ ಸಿಂಗ್ ಮತ್ತವರ ಕುಟುಂಬ ಪಾಕಿಸ್ತಾನದ ಲಾಹೋರ್ಗೆ ಪಕ್ಕದಲ್ಲಿರುವ ಗುಜ್ರಾನ್ವಾಲಾದಲ್ಲಿ ನೆಲೆಸಿತ್ತು. ವಿಭಜನೆ ಬಳಿಕ ಭಾರತದ ಪಟಿಯಾಲ ಜಿಲ್ಲೆಯ ಅಸರ್ಪುರ ಹಳ್ಳಿಗೆ ಬಂದ ಕುಟುಂಬ ಈಗಲೂ ಇಲ್ಲೆ ನೆಲೆಸಿದೆ. ಜೀವನಕ್ಕೆ ಕೃಷಿಯೇ ಆಧಾರ. ಸ್ವಾತಂತ್ರ್ಯಾ ನಂತರ ಹಲವು ಚುನಾವಣೆಗಳು ನಡೆದರೂ ನಮ್ಮ ಕುಟುಂಬ ಶಿರೋಮಣಿ ಅಕಾಲಿದಳಕ್ಕೆ ಬೆಂಬಲ ಸೂಚಿಸಿತ್ತು. ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ನಿಂದ ಪರಿಚಯಸ್ಥರೊಬ್ಬರು ಸ್ಪರ್ಧಿಸಿದ್ದರಿಂದ ಅವರನ್ನು ಬೆಂಬಲಿಸಿದ್ದೆವು. ಆದರೆ, ಈಗ ಮನಸ್ಸು ಬದಲಿಸಿದ್ದೇವೆ. ಅಕಾಲಿದಳ, ಕಾಂಗ್ರೆಸ್ ಇಬ್ಬರಿಂದಲೂ ಬೇಸತ್ತಿದ್ದೇವೆ ಎನ್ನುತ್ತಾರೆ ಕುಟುಂಬದ ಮೂರನೇ ತಲೆಮಾರಿನ 48 ವರ್ಷದ ನಿಶಾಂತ್ ಸಿಂಗ. ಅಸರ್ಪುರ್ ಗ್ರಾಮದಲ್ಲಿ ಅಂದಾಜು 1000 ಮತದಾರರಿದ್ದು, 600- 700 ಮಂದಿ ಆಪ್ ಅಭ್ಯರ್ಥಿ ಬೆಂಬಲಿಸಲಿದ್ದಾರೆ ಎನ್ನುತ್ತಾರೆ ಅವರು.
ಕಳೆದ ಚುನಾವಣೆಯಂತೆ ಈ ಬಾರಿ ಕೂಡ ಪಂಜಾಬ್ ಸಮರ ಕಣದಲ್ಲಿ ಡ್ರಗ್, ನಶೆ, ಮರಳು, ಮದ್ಯ, ಗಣಿ ಮಾಫಿಯಾಗಳದ್ದೇ ಚರ್ಚೆ. ಹಾಗಂತ, ಈ ಮಾಫಿಯಾಗಳಿಗೆ ಬಲಿಯಾಗುತ್ತಿರುವ ಯುವಕರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಹರಿಯಾಣದ ಅಂಬಾಲ ನಗರ ದಾಟುತ್ತಿದ್ದಂತೆ ಪಂಜಾಬ್ಗೆ ಸ್ವಾಗತಿಸುತ್ತದೆ ನೌರ್ ಪಟ್ಟಣ. ಈ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ 31 ವರ್ಷದ ಯುವಕ ವಿಕಾಸ್ ಶರ್ಮ ಕೂಡ ಮಾಫಿಯಾ ಮುಕ್ತ ಪರಿಸರ ನಿರ್ಮಾಣ ಹಾಗೂ ಕ್ಷೇತ್ರದ ಮೂಲಸೌಕರ್ಯ ಸುಧಾರಣೆ ಮಂತ್ರ ಜಪಿಸುತ್ತಿದ್ದಾರೆ. ನೌರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಮದನ್ಲಾಲ್ ಜಲಾಲ್ಪುರ್ ಈ ಬಾರಿಯೂ ಕಣದಲ್ಲಿದ್ದು, ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೇ ಮರಳು- ಅಕ್ರಮ ಮದ್ಯ ಮಾಫಿಯಾದಲ್ಲಿ ತೊಡಗಿಕೊಂಡಿರುವವರ ಜತೆಗಿನ ಒಡನಾಟ, ನಂಟು. ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಪ್ತರೆಂದೇ ಗುರುತಿಸಿಕೊಂಡಿದ್ದ ಮದನ್ಲಾಲ್, ಸರ್ಕಾರದ ಪ್ರಭಾವ ಬಳಸಿ ಮಾಫಿಯಾಗಳಿಗೆ ರಣೆ ಒದಗಿಸುತ್ತಿದ್ದರು ಎಂದು ಸ್ಥಳಿಯರೇ ಮಾತನಾಡಿಕೊಳ್ಳುತ್ತಾರೆ. ಈ ಹಿಂದೆ ಶಿರೋಮಣಿ ಅಕಾಲಿದಳ ಮತ್ತು ಆಮ್ ಆದ್ಮಿ ಪಾಟಿರ್ ಸ್ಥಳಿಯ ಮುಖಂಡರು ಕೂಡ ಮದನ್ಲಾಲ್ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದರು. ಹೀಗಾಗಿ, ಕಾಂಗ್ರೆಸ್ನ ಮದನ್ಲಾಲ್ಗೆ ಅಕಾಲಿದಳ ಅಭ್ಯರ್ಥಿ ಪ್ರೇಮ್ಸಿಂಗ್ ಚಂದುಮಜ್ರಾ ಮತ್ತು ಆಮ್ ಆದ್ಮಿ ಪಾಟಿರ್ ಅಭ್ಯರ್ಥಿ ಗುರ್ಲಾಲ್ ಸಿಂಗ್ ನೌರ್ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದಾರೆ.
ಪಂಜಾಬ್ನ ಮಾಜಾದಲ್ಲಿ ರಾಸಾಯನಿಕ ಬೆರೆಸಿ ತಯಾರಿಸಿದ್ದ ಮದ್ಯ ಕುಡಿದು 130 ಮಂದಿ ಸಾವಿಗೀಡಾಗಿದ್ದ ಪ್ರಕರಣದಲ್ಲಿ ಇದೇ ಕ್ಷೇತ್ರದ ಖಾನ್ಪುರ್ ಖುರ್ದ ಗ್ರಾಮದ ಸರಪಂಚ್ ಕಾಂಗ್ರೆಸ್ನ ಅಮ್ರಿಕ್ ಸಿಂಗ್ ಬಂಧನಕ್ಕೀಡಾಗಿದ್ದಾರೆ. ಈ ಪ್ರಕರಣವನ್ನೂ ವಿಪಗಳ ಅಭ್ಯರ್ಥಿಗಳು ಕಾಂಗ್ರೆಸ್ ಶಾಸಕರ ವಿರುದ್ಧದ ಅಸಗಳನ್ನಾಗಿ ಪ್ರಯೋಗಿಸುತ್ತಿದ್ದಾರೆ. ಆದರೆ ಆರೋಪಗಳನ್ನು ತಳ್ಳಿಹಾಕಿರುವ ಮದನ್ಲಾಲ್, ಕ್ಷೇತ್ರದಲ್ಲಿ ರೂ. 360 ಕೋಟಿ ಮೌಲ್ಯದ ನೀರು ಸಂಸ್ಕರಣಾ ಟಕ ನಿರ್ಮಾಣ ಮಾಡಿದ್ದಲ್ಲದೆ ರೂ 300 ಕೋಟಿಗೂ ಹೆಚ್ಚು ವೆಚ್ಚದ ಇತರೆ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ ಎಂದು ಸಮಥಿರ್ಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ವಿಕಾಸ್ ಶರ್ಮ ಬೆಂಬಲಿಗರು ನಾಮ್ ಭೀ ವಿಕಾಸ್, ಕರ್ನಾ ಭೀ ವಿಕಾಸ್ ಎಂಬ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ವ್ಯಕ್ತಿಗತವಾಗಿ ಪ್ರಸಿದ್ಧಿಯಾಗಿದ್ದರೂ, ಬಿಜೆಪಿ ಮೇಲಿನ ಆಕ್ರೋಶ (ಮೂರು ಕೃಷಿ ಕಾಯ್ದೆ ಕಾರಣಕ್ಕಾಗಿ) ವಿಕಾಸ್ ಶರ್ಮಗೆ ತಕ್ಕಮಟ್ಟಿಗೆ ಡ್ಯಾಮೇಜ್ ಮಾಡುತ್ತಿರುವಂತಿದೆ.
ರೈತರಲ್ಲಿ ಬಿಜೆಪಿ ಮೇಲೆ ಸಿಟ್ಟಿದೆ ನಿಜ. ಆದರೆ, ಪಿಎಂ ಮೋದಿ ಮೆ ಕೇಳಿದ್ದಾರೆ. ಇದಕ್ಕಿಂತ ಇನ್ನೇನು ಮಾಡಬಹುದು? 1984ರ ಸಿಖ್ ವಿರೋಧಿ ದಂಗೆಯಲ್ಲಿ ಸಾವಿರಾರು ಅಮಾಯಕ ಸಿಖ್ಖರನ್ನು ಕೊಂದು ಹಾಕಿದ ಕಾಂಗ್ರೆಸ್ ಪದ ನಾಯಕರು ಎಂದಾದರೂ ನಮ್ಮಿಂದ ತಪ್ಪಾಯಿತು ಎಂದಿದ್ದಾರೆಯೇ? ಎಂದು ಪ್ರಶ್ನಿಸುತ್ತಾರೆ ಸ್ಥಳಿಯ ಬಿಜೆಪಿ ಕಚೇರಿಯಲ್ಲಿ ವಿಜಯವಾಣಿಗೆ ಮಾತಿಗೆ ಸಿಕ್ಕ ನಿವೃತ್ತ ಶಿಣ ಅಧಿಕಾರಿ ಕಿಶನ್ ಕುಮಾರ್ ಶರ್ಮ. 1952ರ ಮೊದಲ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗೆ ಒಂದೆರಡು ಸಲ ಬಿಟ್ಟರೆ ಯಾವ ಪವೂ ನೌರ್ ಮೂಲದ ವ್ಯಕ್ತಿಗೆ ಟಿಕೆಟ್ ನೀಡಿಯೇ ಇಲ್ಲ. ಹಿಂದೊಮ್ಮೆ ಕಾಂಗ್ರೆಸ್ ಗುರ್ದರ್ ಸಿಂಗ್ ಎಂಬವರಿಗೆ ಟಿಕೆಟ್ ಕೊಟ್ಟಿತ್ತಾದರೂ, ಚುನಾವಣೆ ಗೆಲ್ಲಲಿಲ್ಲ. ಹೀಗಾಗಿ, ಸ್ಥಳಿಯ ವ್ಯಕ್ತಿ ಶಾಸಕನಾಗಿ ಆಯ್ಕೆಯಾಗಿಯೇ ಇಲ್ಲ. ಹೀಗಾಗಿ, ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದರೆ ಸ್ಥಳಿಯ ಸಮಸ್ಯೆಗಳು ನಿವಾರಣೆಯಾಗಲಿವೆ ಎನ್ನುತ್ತಾರೆ ಕ್ಷೇತ್ರದ ಂಡಾಖೇಡಿಯ ಬಿಜೆಪಿ ಮಂಡಲ ಮುಖ್ಯಸ್ಥ ರಾಜ್ಕುಮಾರ.
ಸನೌರ್ ಕ್ಷೇತ್ರದಿಂದ ಶಿರೋಮಣಿ ಅಕಾಲಿದಳದ ಹಾಲಿ ಶಾಸಕ ಹರಿಂದರ್ಪಾಲ್ ಚಂದುಮಜ್ರಾ ಮರು ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ನಿಂದ ಹರಿಂದರ್ಪಾಲ್ ಹರಿಮಾನ್, ಆಪ್ನಿಂದ ಹಮೀರ್ತ್ಸಿಂಗ್ ಪಠಾನ್ ಮಜ್ರಾ ಮತ್ತು ಬಿಜೆಪಿಯಿಂದ ಇಂದರ್ಪಾಲ್ ಚಾಹಲ್ ಕಣದಲ್ಲಿದ್ದಾರೆ. ಆದರೆ, ಹಾಲಿ ಶಾಸಕರಿಗೆ ಆಮ್ ಆದ್ಮಿ ಅಭ್ಯರ್ಥಿ ಪಠಾಣ್ಮಜ್ರಾ ಪ್ರಬಲ ಸವಾಲೊಡ್ಡಿದ್ದರೂ, ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಮೇಲಿರುವ ಕ್ರಿಮಿನಲ್ ಕೇಸಿನ ಬಗ್ಗೆ ಮಾಹಿತಿ ನೀಡದ ಕಾರಣಕ್ಕಾಗಿ ಫೆ.11ರಂದು ರಾಜ್ಯ ಚುನಾವಣಾ ಆಯೋಗ ಅವರ ವಿರುದ್ಧ ಕೇಸು ದಾಖಲಿಸಿದೆ. ಹಾಗಂತ, ಬದಲಾವಣೆ ಬಯಸಿರುವ ಮತದಾರರ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಅಸರಪುರ ಗ್ರಾಮದಿಂದ ಕೊಂಚ ದೂರದಲ್ಲಿದ್ದ ಕೃಷಿ ಭೂಮಿಯಲ್ಲಿ ಆಲೂಗಡ್ಡೆ ಕೃಷಿ ಮಾಡುತ್ತಿರುವ ನಿಹಾಲ್ ಸಿಂಗ್ ಕೂಡ ಅಕಾಲಿದಳ- ಆಪ್ ಫೈಟ್ ಜೋರಿದೆ. ಆದರೆ, ನಶೆಯ ಕಾಟ ಕಡಿಮೆ ಮಾಡಲು ಆಪ್ ಗೆಲ್ಲಬೇಕು ಎಂದರು. ಮುಂದೆ ಸಾಗುತ್ತಿದ್ದಂತೆ ಮಾತಿಗೆ ಸಿಕ್ಕ ಸರ್ಕಾರಿ ಉದ್ಯೋಗಿಗಳಾಗಿರುವ ದಂಪತಿ ಡಾ. ನಿರ್ಮಲ್ಜಿತ್ ಕೌರ್ ಮತ್ತು ಡಾ. ಬಲ್ಜಿಂದರ್ ಸಿಂಗ್ ಕೂಡ ಇಲ್ಲಿ ಆಮ್ ಆದ್ಮಿಯದ್ದೇ ಹವಾ. ಕಾಂಗ್ರೆಸ್, ಅಕಾಲಿದಳ ಬದಲಿಗೆ ಮೂರನೇ ವ್ಯಕ್ತಿಗೆ ಅವಕಾಶ ನೀಡುವ ಬಗ್ಗೆಯೇ ಚರ್ಚೆ ಎಂಬುದನ್ನು ಒಪ್ಪಿಕೊಂಡರು.
ಕಬಡ್ಡಿ ಬಳಿಕ ರಾಜಕೀಯದಾಟ
ನೌರ್ ಕ್ಷೇತ್ರದಿಂದ ಭಾರತದ ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಪಟು ಗುರುಲಾಲ್ ಸಿಂಗ್ ನೌರ್ ಅವರು ಆಮ್ ಆದ್ಮಿಯಿಂದ ಸ್ಪರ್ಧಿಸುತ್ತಿರುವುದು ಕದನಕಣದ ರೋಚಕತೆ ವೃದ್ಧಿಸಿದೆ. ಕಳೆದ ಜೂನ್ನಲ್ಲಿ ರಾಜಕೀಯಕ್ಕೆ ಧುಮುಕುವ ಮುನ್ನ ಗುರುಲಾಲ್ ಪಂಜಾಬ್ ಪೊಲೀಸ್ನಲ್ಲಿ ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನೌರ್ನ ಅಜ್ರಾವರ್ ಹಳ್ಳಿಯಲ್ಲಿ ಕ್ರೀಡಾ ಸಮುಚ್ಛಯ ನಿರ್ಮಾಣ ಮಾಡಿ ಸ್ಥಳಿಯ ಮಟ್ಟದಲ್ಲಿ ಹೆಸರು ಮಾಡಿರುವ ಗುರುಲಾಲ್, ಆಪ್ ಸರ್ಕಾರ ಅಧಿಕಾರಕ್ಕೆ ಬಂದರೆ ಹೊಸ ನೀತಿಯ ಮೂಲಕ ಕ್ರೀಡಾಳುಗಳಿಗೆ ಸರ್ಕಾರಿ ನೌಕರಿ ಕೊಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ಆಮ್ ಆದ್ಮಿ ಪಾಟಿರ್ಯ ಸಿಎಂ ಅಭ್ಯರ್ಥಿ ಭಗವಂತ್ ಸಿಂಗ್ ಮಾನ್ ಪ್ರಾಮಾಣಿಕ. ಪಂಜಾಬ್ನ ಎಷ್ಟೋ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. 2017ರಲ್ಲೂ ಆಪ್ ಸ್ಪರ್ಧಿಸಿತ್ತು. ಆದರೆ, ಆಗ ಅವರ ಮೇಲೆ ವಿಶ್ವಾಸವಿರಲಿಲ್ಲ. ದೆಹಲಿ ಮಾದರಿ ಯಶಸ್ವಿಯಾದ ಬಳಿಕ ಈಗ ನಮಗೆ ನಂಬಿಕೆ ಬಂದಿದೆ. ನಾಯಕತ್ವದ ಸ್ಪಷ್ಟತೆಯೂ ಸಿಕ್ಕಿದೆ.
|ನಿಶಾಂತ್ ಸಿಂಗ್, ಅಸರ್ಪುರ್ ಗ್ರಾಮದ ಕೃಷಿಕ