ರಾಷ್ಟ್ರ ನಿರ್ಮಾಣಕ್ಕೆ ಸ್ಕೌಟ್ಸ್​, ಗೈಡ್​ ಸಂಸ್ಥೆಗೆ ಮಕ್ಕಳನ್ನು ಸೇರಿಸಿ

Published on

ವಿಜಯವಾಣಿ ಸುದ್ದಿಜಾಲ ಶಿಡ್ಲಟ್ಟ

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2 ದಿನಗಳ ಕಾಲ ಜಿಲ್ಲಾಮಟ್ಟದ ನಿಪುಣ, ತೃತೀಯ ಸೋಪಾನ ಪರೀಾ ಶಿಬಿರ ಮತ್ತು ರಾಜ್ಯ ಪುರಸ್ಕಾರ ಪೂರ್ವ ಸಿದ್ಧತಾ ಶಿಬಿರ ನಡೆಯಿತು.

ಈ ಸಾಲಿನಲ್ಲಿ ರಾಜ್ಯಪಾಲರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಸ್ಕೌಟ್ಸ್​ ಮತ್ತು ಗೈಡ್ಸ್​ ರೋವರ್ಸ್​ ಮತ್ತು ರೇಂರ್ಜಸ್​ ಅವರಿಗಾಗಿ ಪೂರ್ವ ಸಿದ್ಧತಾ ಪರೀೆ ಹಾಗೂ ಜಿಲ್ಲಾ ಪುರಸ್ಕಾರಕ್ಕಾಗಿ ತೃತೀಯ ಸೋಪಾನ ಪರೀಾ ಶಿಬಿರ ನಡೆಸಲಾಯಿತು. ತೃತೀಯ ಸೋಪಾನ ಶಿಬಿರದಲ್ಲಿ ಉತ್ತೀರ್ಣಗೊಳ್ಳುವ ಸ್ಕೌಟ್ಸ್​ ಗೈಡ್ಸ್​ ವಿದ್ಯಾರ್ಥಿಗಳು ಮುಂದಿನ ಸಾಲಿಗೆ ರಾಜ್ಯಪಾಲರ ಪ್ರಮಾಣ ಪತ್ರಕ್ಕಾಗಿ ರಾಜ್ಯ ಪುರಸ್ಕಾರ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯಲಿದ್ದಾರೆ.

ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಸಿ.ಬಿ.ಪ್ರಕಾಶ್​ ಮಾತನಾಡಿ, ಸ್ಕೌಟ್​ ಮತ್ತು ಗೈಡ್ಸ್​ ಸಂಸ್ಥೆಯು ಸೇವಾ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರದೆ ವಿದ್ಯಾರ್ಥಿಗಳ ಬೆಳವಣಿಗೆಗೆ ಹಾಗೂ ಕೌಶಲಯುಕ್ತ ಜೀವನ ನಡೆಸಲು ಹಲವಾರು ಅಂಶಗಳನ್ನು ಒಳಗೊಂಡಿದೆ. ಅಪಘಾತದ ಸಮಯದಲ್ಲಿ ಚಿಕಿತ್ಸೆ ನೀಡಲು ಪ್ರಥಮ ಚಿಕಿತ್ಸೆ ತರಬೇತಿ, ಸ್ಕೌಟಿಂಗ್​ನ ಇತಿಹಾಸ, ಸಮಾಜದೊಂದಿಗೆ ವಿದ್ಯಾರ್ಥಿಗಳ ಸಂವಹನ, ಸ್ವಯಂಶಿಸ್ತು ಹೀಗೆ ಹಲವಾರು ೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ ಶಾಲೆಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಈ ಅಂಶಗಳನ್ನು ಪರೀಾ ಶಿಬಿರದಲ್ಲಿ

ಪರೀಸಲಾಗುವುದು ಎಂದು ತಿಳಿಸಿದರು.

ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಯು ಜಗತ್ತಿನ 216 ದೇಶಗಳಲ್ಲಿ ಒಂದೇ ನಿಯಮ ಮತ್ತು ತತ್ವಗಳ ಆಧಾರದಲ್ಲಿ ನಡೆಯುತ್ತಿರುವ ಏಕ ಮಾತ್ರ ಸಮವಸಧಾರಿ ಸಂಸ್ಥೆಯಾಗಿದ್ದು, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಾಲಕರು ಸ್ಕೌಟ್ಸ್​ ಮತ್ತು ಗೈಡ್​ ಸಂಸ್ಥೆಗೆ ಮಕ್ಕಳನ್ನು ಸೇರಿಸಬೇಕು ಎಂದರು.

ಈ ಶಿಬಿರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ 30 ರೋವರ್ಸ್​ ಮತ್ತು ರೇಂರ್ಜಸ್​ಗಳು, 140 ಸ್ಕೌಟ್ಸ್​ ಮತ್ತು ಗೈಡ್ಸ್​ ವಿದ್ಯಾರ್ಥಿಗಳು, 18 ಶಿಕ್ಷಕರು, ಎಲ್ಲ ತಾಲೂಕು ಸಂಸ್ಥೆಗಳ ಕಾರ್ಯದರ್ಶಿಗಳು, ಪದಾಧಿಕಾರಿಗಳು ಸೇರಿ 200 ಜನ ಭಾಗವಹಿಸಿದ್ದರು. ಪ್ರಥಮ ದರ್ಜೆ ಕಾಲೇಜಿನ ರೋವರ್​ ಲೀಡರ್​ ರವಿಕುಮಾರ್​, ಚಿಕ್ಕಬಳ್ಳಾಪುರ ತಾಲೂಕು ಕಾರ್ಯದರ್ಶಿ ನಾರಾಯಣಸ್ವಾಮಿ, ಗೌರಿಬಿದನೂರು ತಾಲೂಕು ಕಾರ್ಯದರ್ಶಿ ಗಿರಿಧರ್​, ಶಿಡ್ಲಟ್ಟ ತಾಲೂಕು ಕಾರ್ಯದರ್ಶಿ ಮುನಿರಾಜು, ಸಹಕಾರ್ಯದರ್ಶಿ ನಾಗರಾಜು, ಜಿಲ್ಲಾ ಸಮಿತಿ ಸದಸ್ಯ ನರಸಿಂಹಮೂರ್ತಿ, ಜಿಲ್ಲಾ ಸಮಿತಿ ಸದಸ್ಯೆ ಕೀರ್ತಿ ಬಸಪ್ಪ ಲಗಳಿ, ಬಾಗೇಪಲ್ಲಿ ತಾಲೂಕು ಕಾರ್ಯದರ್ಶಿ ಉಮಾ, ಜಿಲ್ಲಾ ತರಬೇತಿ ಆಯುಕ್ತರುಗಳಾದ ಲಕ್ಷಿ$್ಮಹೊನ್ನಪ್ಪ ನಾಯ್ಕ, ರಾಮಪ್ರಸಾದ್​ ಶಿಕ್ಷಕರಾದ ರಾಕೇಶ್​, ಅಮಲಾ, ಗಂಗರತ್ನಮ್ಮ, ನರಸಿಂಹಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net