

ರಾಣೆಬೆನ್ನೂರ: ನಗರದ ಕೆಎಲ್ಇ ಸಂಸ್ಥೆಯ ರಾಜ ರಾಜೇಶ್ವರಿ ಮಹಾವಿದ್ಯಾಲಯದಲ್ಲಿ ರಾಜ್ಯದ ನಂ. 1 ಕನ್ನಡ ದಿನ ಪತ್ರಿಕೆ "ವಿಜಯವಾಣಿ' ಆರಂಭಿಸಿರುವ ಉಚಿತ ಗಾನಿರ್ಯರ್ ಹೇರ್ ಕಲರಿಂಗ್ ಅಭಿಯಾನವು ಗುರುವಾರವೂ ಮುಂದುವರಿಯಿತು. 2ನೇ ದಿನವಾದ ಗುರುವಾರ 175ಕ್ಕೂ ಅಧಿಕ ಜನರು ಹೇರ್ ಕಲರಿಂಗ್ ಮಾಡಿಸಿಕೊಂಡರು.
ಯುವಕರು, ಯುವತಿಯರು, ಪುರುಷರು ಹಾಗೂ ಮಹಿಳೆಯರು ಬಂದು ತಮಗಿಷ್ಟವಾದ ಹೇರ್ ಕಲರ್ ಹಚ್ಚಿಸಿಕೊಂಡರು. ಅಭಿಯಾನ ಆರಂಭವಾದ ಬೆಳಗಿನಿಂದ ಹಿಡಿದು ಸಂಜೆಯವರೆಗೂ ಜನರು ಬಂದು ಕಪು$್ಪ, ಕೆಂಪು, ಕಡುಗಪು$್ಪ ಸೇರಿ ಇತರ ಬಣ್ಣಗಳನ್ನು ಹಚ್ಚಿಸಿಕೊಂಡು ಸೆಲ್ಫಿ ಬೋರ್ಡ್ ಹತ್ತಿರ ನಿಂತು ೋಟೊ ತೆಗೆಯಿಸಿಕೊಂಡು ಸಂಭ್ರಮಿಸಿದರು.
ರಾಣೆಬೆನ್ನೂರ ನಗರದಲ್ಲಿ ನಡೆದ ಎರಡು ದಿನದ ಅಭಿಯಾನದಲ್ಲಿ ಒಟ್ಟು 375 ಜನ ಹೇರ್ ಕಲರಿಂಗ್ ಮಾಡಿಸಿಕೊಳ್ಳುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಿದರು.