ದಿನ‌ ಭವಿಷ್ಯ; ಈ ರಾಶಿಯವರಿಗೆ ಇಂದು ವಿಶೇಷ ಜವಾಬ್ದಾರಿ ಸಿಗಬಹುದು

Nithya-Bhavishya
Published on

ಮೇಷ; ವಿಶೇಷ ಜವಾಬ್ದಾರಿ ಸಿಗಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಶುಭಸಂಖ್ಯೆ: 2

ವೃಷಭ; ಮಾನಸಿಕ ಕಿರಿಕಿರಿ ಆಗಬಹುದು. ಹಿತಶತ್ರುಗಳಿಂದ ಭೂ ವಿವಾದದಲ್ಲಿ ಸಮಸ್ಯೆ. ಆರೋಗ್ಯದ ಕಡೆ ಗಮನ ಇರಲಿ. ಶುಭಸಂಖ್ಯೆ: 9

ಮಿಥುನ; ಅಷ್ಟಮ ಶನಿಯ ಪ್ರಭಾವದಿಂದ ಆರೋಗ್ಯದಲ್ಲಿ ಏರುಪೇರು. ಉದ್ಯೋಗದಲ್ಲಿ ಡೋಲಾಯಮಾನ ಸ್ಥಿತಿ ಇದೆ. ಜಾಗ್ರತೆ. ಶುಭಸಂಖ್ಯೆ: 2

ಕಟಕ; ನವಮದ ಗುರು ಆಶಾದಾಯಕನಾಗಿದ್ದಾನೆ. ನಿಮ್ಮ ನಿರ್ಧಾರಕ್ಕೆ ಹಿರಿಯರ ಬೆಂಬಲ ಸಿಗಲಿದೆ. ಅನವಶ್ಯಕ ಧನವ್ಯಯ. ಶುಭಸಂಖ್ಯೆ: 3

ಸಿಂಹ; ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ನಿಮ್ಮ ಜ್ಞಾನ, ಪ್ರತಿಭೆಗಳಿಗೆ ತಕ್ಕುದಾದ ಸದವಕಾಶ ಒದಗಿ ಬರಲಿದೆ. ಶುಭಸಂಖ್ಯೆ: 6

ಕನ್ಯಾ; ಮಕ್ಕಳ ವಿಷಯದಲ್ಲಿ ಅಸಮಾಧಾನ. ಗುರುವಿನಿಂದ ಅನಾರೋಗ್ಯ ಉಲ್ಬಣಿಸಬಹುದು. ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 7

ತುಲಾ; ನಿಮ್ಮ ಪ್ರಯತ್ನ ಪ್ರತಿಭೆಗೆ ವಿಶೇಷ ಗೌರವ. ಧಾರ್ವಿುಕ ಸಿದ್ಧಿಗಾಗಿ ಚಡಪಡಿಕೆ. ಗುರು ಹಿರಿಯರ ಮಾರ್ಗದರ್ಶನ. ಶುಭಸಂಖ್ಯೆ: 9

ವೃಶ್ಚಿಕ; ಈ ದಿನ ನಿಮಗೆ ಆಶಾದಾಯಕವಾಗಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಸಂಗಾತಿಯೊಂದಿಗೆ ಸಣ್ಣ ವಿರಸ. ಶುಭಸಂಖ್ಯೆ: 1

ಧನಸ್ಸು; ಆರ್ಥಿಕ ಮುಗ್ಗಟ್ಟು ಅನುಭವಿಸಲಿದ್ದೀರಿ. ಪ್ರತಿಷ್ಠೆಗೆ ಪೆಟ್ಟುಕೊಡುವ ಘಟನೆ ಸಂಭವಿಸಬಹುದು. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 5

ಮಕರ; ಕುಟುಂಬದ ಬೆಂಬಲ ಆಶಾಕಿರಣವಾಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಮಕ್ಕಳ ಭವಿಷ್ಯದ ಚಿಂತೆ. ಶುಭಸಂಖ್ಯೆ: 7

ಕುಂಭ; ಉದ್ಯೋಗದಲ್ಲಿ ಸ್ಥಾನಪಲ್ಲಟ ಆಗಬಹುದು. ವ್ಯಾಪಾರಸ್ಥರಿಗೆ ನಿರೀಕ್ಷಿತ ಧನಲಾಭ. ಸಂಗಾತಿ ಯೊಂದಿಗೆ ತಾಳ್ಮೆಯಿರಲಿ. ಶುಭಸಂಖ್ಯೆ: 6

ಮೀನ; ಕುಟುಂಬದ ಸಮಸ್ಯೆಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿ. ಆತ್ಮೀಯರ ಅಗಲಿಕೆ. ಆರೋಗ್ಯದ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net