ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಲಾಭದ ಗುರು ಧನಲಾಭ ತರುವನು

Nithya-Bhavishya
Published on

ಮೇಷ

ಲಾಭದ ಗುರು ಧನಲಾಭ ತರುವನು. ಹಿರಿಯರ ಸಲಹೆ ನಿಮಗೆ ದಾರಿದೀಪ ಆಗಬಹುದು. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 9

ವೃಷಭ

ಅಂತರ್ಜಾಲ ವ್ಯಾಪಾರಿಗಳಿಗೆ ಅಧಿಕ ಲಾಭ. ಕುಟುಂಬದಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಗೃಹ ನಿರ್ವಣದಲ್ಲಿ ಉತ್ತಮ ಪ್ರಗತಿ. ಶುಭಸಂಖ್ಯೆ: 3

ಮಿಥುನ

ಅನಾರೋಗ್ಯ ಸಮಸ್ಯೆ ತೀವ್ರವಾಗಬಹುದು. ವೈದ್ಯರ ಸಲಹೆ ಪಾಲಿಸಿ. ಅನಾವಶ್ಯಕ ಖರ್ಚು. ಆರೋಗ್ಯ ಸುಧಾರಣೆ. ಶುಭಸಂಖ್ಯೆ: 3

ಕಟಕ

ವಿದ್ಯಾರ್ಥಿಗಳಿಗೆ ಅಲ್ಪ ಮಾತ್ರ ಪ್ರಗತಿ. ಮಗಳ ಮದುವೆ ವಿಚಾರದಲ್ಲಿ ಸಮಾಧಾನ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 6

ಸಿಂಹ

ಬಹುದಿನದ ಕನಸು ನನಸು. ದುರಭಿಮಾನದಿಂದ ವರ್ತಿಸಬೇಡಿ. ಹಿರಿಯರನ್ನು ನಿರ್ಲಕ್ಷಿಸಬೇಡಿ. ದಿನಾಂತ್ಯಕ್ಕೆ ಆಯಾಸ. ಶುಭಸಂಖ್ಯೆ: 8

ಕನ್ಯಾ

ಸಾರ್ವಜನಿಕ ರಂಗದಲ್ಲಿ ಅವಮಾನ. ಕೃಷಿಕರಿಗೆ ಅಲ್ಪ ಮಟ್ಟದಲ್ಲಿ ಪ್ರಗತಿ. ದಿನದ ಮಧ್ಯಭಾಗದಲ್ಲಿ ಚಿಂತೆ. ಶುಭಸಂಖ್ಯೆ: 5

ತುಲಾ

ನಂಬಿಕೆಗೆ ದ್ರೋಹ ಮಾಡಿದವರ ಬಗ್ಗೆ ಬೇಸರ. ಕುಟುಂಬದಲ್ಲಿ ಅಸಮಾಧಾನ. ಸಹೋದರನೊಂದಿಗೆ ವಾಗ್ವಾದ. ಶುಭಸಂಖ್ಯೆ: 1

ವೃಶ್ಚಿಕ

ಈ ದಿನ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಕುಟುಂಬದಲ್ಲಿ ಸೌಖ್ಯ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಶುಭಸಂಖ್ಯೆ :4

ಧನಸ್ಸು

ಕಾರ್ಯಸಾಧನೆಗಾಗಿ ಪಟ್ಟ ಶ್ರಮ ಸಾರ್ಥಕವೆನಿಸಲಿದೆ. ಮಾತಿನಿಂದ ಶತ್ರುಗಳು ಸೃಷ್ಟಿಯಾದಾರು, ಎಚ್ಚರ. ಶುಭಸಂಖ್ಯೆ :2

ಮಕರ

ಪದೇ ಪದೇ ವಿಫಲತೆಯಿಂದ ಮನಸ್ಸಿಗೆ ನಿರಾಸೆ. ಅನಾರೋಗ್ಯದ ಸಮಸ್ಯೆ. ಕಚೇರಿಯಲ್ಲಿ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 6

ಕುಂಭ

ಸಂಬಂಧವಿಲ್ಲದ ವಿಷಯಗಳಲ್ಲಿ ತಲೆಹಾಕಬೇಡಿ. ಭವಿಷ್ಯದ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 5

ಮೀನ

ಪ್ರತಿಭಾನ್ವಿತರಿಗೆ ಉತ್ತಮ ಅವಕಾಶ.ವ್ಯಾಪಾರ ಉದ್ಯೋಗಗಳಲ್ಲಿ ಪ್ರಗತಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net