ದಿನ ಭವಿಷ್ಯ; ಈ ರಾಶಿಯವರ ಮನೆಗಳಿಗೆ ಇಂದು ಅತಿಥಿಗಳ ಆಗಮನ

Nithya Bhavishya
Published on

ಮೇಷ

ಬಾಳ ಸಂಗಾತಿಯ ಸಲಹೆಯನ್ನು ಕಡೆಗಣಿಸದೇ ಸ್ವೀಕರಿಸಿ. ಅನಿರೀಕ್ಷಿತವಾಗಿ ಅತಿಥಿಗಳ ಆಗಮನ, ಸಂತೋಷ ಕೂಟ. ಶುಭಸಂಖ್ಯೆ: 5

ವೃಷಭ

ಹಿತಶತ್ರುಗಳ ಉಪಟಳ ಮಿತಿ ಮೀರಬಹುದು. ಸಹೋದರರಿಂದ ಸಹಾಯಹಸ್ತ. ಸಂಜೆಯ ವೇಳೆಗೆ ಶುಭಸುದ್ದಿ ಬರಲಿದೆ. ಶುಭಸಂಖ್ಯೆ: 3

ಮಿಥುನ

ಮಕ್ಕಳ ವಿಷಯದಲ್ಲಿ ಹೆಮ್ಮೆ. ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಸಂತಸ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು. ಶುಭಸಂಖ್ಯೆ: 2

ಕಟಕ

ಮನೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಕ್ಕೆ ಚಾಲನೆ ದೊರೆಯಲಿದೆ. ಮೇಲಧಿಕಾರಿಗಳಿಂದ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 7

ಸಿಂಹ

ಅಕ್ಕ ತಂಗಿಯರ ಬಾಂಧವ್ಯವನ್ನು ಹಠದಿಂದ ಹಾಳು ಮಾಡಿಕೊಳ್ಳಬೇಡಿ. ಅತಿಥಿಗಳನ್ನು ಆತ್ಮೀಯವಾಗಿ ಸತ್ಕರಿಸಿ. ಶುಭಸಂಖ್ಯೆ: 9

ಕನ್ಯಾ

ಕುಟುಂಬದಲ್ಲಿ ಸಂಭ್ರಮ. ಹಣದ ಸಮಸ್ಯೆ ಉಂಟಾಗಬಹುದು. ಆದರೆ ದಿನಾಂತ್ಯದಲ್ಲಿ ಧನಾಗಮವಾಗಿ ಸಮಾಧಾನ. ಶುಭಸಂಖ್ಯೆ: 6

ತುಲಾ

ಬಹುಕಾಲದಿಂದ ಕಾಡುತ್ತಿರುವ ಸಮಸ್ಯೆಗೆ ಸ್ನೇಹಿತರಿಂದ ಸೂಕ್ತ ಪರಿಹಾರ. ಕಲಾವಿದರಿಗೆ ವಿಶೇಷ ದಿನ ಕಾಯುತ್ತಿದೆ. ಶುಭಸಂಖ್ಯೆ: 3

ವೃಶ್ಚಿಕ

ನ್ಯಾಯಾಲಯದ ಆದೇಶದ ನಿರೀಕ್ಷೆ, ಆದರೆ ನಿರಾಸೆ. ಅನಾರೋಗ್ಯ ಉಲ್ಬಣ. ಸುಬ್ರಹ್ಮಣ್ಯ ಸ್ವಾಮಿ ಯನ್ನು ಆರಾಧಿಸಿ. ಶುಭಸಂಖ್ಯೆ: 8

ಧನಸ್ಸು

ಮಾತು ಹಿಡಿತ ತಪ್ಪದೆ ಹಿತ ಮಿತವಾಗಿರಲಿ. ಹಿತಶತ್ರುಗಳಿಂದ ವ್ಯವಸ್ಥಿತ ಅಪಪ್ರಚಾರ ಸಾಧ್ಯತೆೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 5

ಮಕರ

ಹಣದ ಅಪವ್ಯಯ ನಿಯಂತ್ರಿಸಿ. ನಿರೀಕ್ಷೆಯಲ್ಲಿ ಇದ್ದ ಹಣ ಬರದೇ ಇರಬಹುದು.ಅಭ್ಯಾಗತರ ಆಗಮನ. ಸಂತಸ. ಶುಭಸಂಖ್ಯೆ: 2

ಕುಂಭ

ಕೋಪದ ಕೈಗೆ ಬುದ್ಧಿ ಕೊಡಬೇಡಿ. ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ. ವ್ಯೆದ್ಯರ ಸಲಹೆ ಪಾಲಿಸಿ. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 9

ಮೀನ

ಇಟ್ಟ ಹೆಜ್ಜೆ ತಪ್ಪಾಗಬಾರದು. ಹೀಗಾಗಿ ನಿರ್ಧಾರ ಕೈಗೊಳ್ಳುವ ಮೊದಲು ನೂರು ಸಲ ಯೋಚಿಸಿ. ಅನಿರೀಕ್ಷಿತ ಧನಾಗಮ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net