ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ತೀರ್ಥಕ್ಷೇತ್ರ ಯಾತ್ರೆಯ ಸಾಧ್ಯತೆ

astrology
Published on

ಮೇಷ: ಸಂಬಂಧಿಗಳಿಂದ ಪಿತೂರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಮಾನಸಿಕ ವೇದನೆ. ಮಾತಿನ ಮೇಲೆ ನಿಗಾ ಇರಲಿ. ಶುಭಸಂಖ್ಯೆ: 9

ವೃಷಭ: ಮಾನಹಾನಿ. ಆರೋಗ್ಯದಲ್ಲಿ ಏರುಪೇರು. ತಾಯಿಯೊಂದಿಗೆ ಕಲಹ ಮಾಡಬೇಡಿ. ಹಿರಿಯರ ಉಪದೇಶದಿಂದ ಮನಶ್ಶಾಂತಿ. ಶುಭಸಂಖ್ಯೆ:1

ಮಿಥುನ: ಕುಟುಂಬದಲ್ಲಿ ಅನರ್ಥವಾಗುವ ಸಾಧ್ಯತೆ. ಶತ್ರು ಬಾಧೆಯಿಂದ ಮಾನಸಿಕ ಅಶಾಂತಿ. ವಾಹನ ಚಾಲಕರು ಜಾಗ್ರತೆ ವಹಿಸಿ. ಶುಭಸಂಖ್ಯೆ: 5

ಕಟಕ: ತೀರ್ಥಕ್ಷೇತ್ರ ಯಾತ್ರೆಯ ಸಾಧ್ಯತೆ. ಶೀತ ಸಂಬಂಧೀ ರೋಗಗಳು ಕಾಡಬಹುದು. ಚಂಚಲ ಮನಸ್ಸು. ಪರಸ್ಥಳ ವಾಸ ಸಾಧ್ಯತೆ. ಶುಭಸಂಖ್ಯೆ:3

ಸಿಂಹ: ಆಲಸ್ಯ ಮನೋಭಾವ ವಿಪರೀತ ಕಾಡಲಿದೆ. ಸಹೋದ್ಯೋಗಿಗಳಿಂದ ಕಲಹ ಸಾಧ್ಯತೆ. ದಾಂಪತ್ಯ ದಲ್ಲಿ ವಿರಸ. ಅಧಿಕ ಖರ್ಚು. ಶುಭಸಂಖ್ಯೆ: 6

ಕನ್ಯಾ: ನೀಚ ಜನರಿಂದ ತೊಂದರೆ ಉಂಟಾದೀತು ಎಚ್ಚರ. ಕೃಷಿಯಲ್ಲಿ ಲಾಭವಾಗಲಿದೆ. ಸ್ತ್ರೀಯರಿಗೆ ಇಷ್ಟಾರ್ಥಸಿದ್ಧಿಸಲಿದೆ. ಶುಭಸಂಖ್ಯೆ: 7

ತುಲಾ: ಮಾನಸಿಕ ವೇದನೆ ಉಂಟಾಗಬಹುದು. ಹಿತಶತ್ರುಗಳಿಂದ ತೊಂದರೆ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಮಕ್ಕಳಿಂದ ಬೋಧನೆ. ಶುಭಸಂಖ್ಯೆ: 2

ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು ಉಂಟಾದೀತು. ಯತ್ನ ಕೆಲಸದಲ್ಲಿ ವಿಘ್ನ. ಶತ್ರುಗಳ ಜಾಲಕ್ಕೆ ಬೀಳುವಿರಿ, ಹುಷಾರಾಗಿರಿ. ಅನಾರೋಗ್ಯ. ಶುಭಸಂಖ್ಯೆ: 6

ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ. ವಾದ-ವಿವಾದಗಳಲ್ಲಿ ಭಾಗಿ. ದೂರ ಪ್ರಯಾಣ ಮಾಡಬೇಕಾದೀತು. ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 7

ಮಕರ: ತಾಳ್ಮೆ ಅಮೂಲ್ಯ ಎಂಬುದನ್ನು ನೆನಪಿಡಿ. ಅನ್ಯ ಜನರಲ್ಲಿ ದ್ವೇಷ. ರೋಗಬಾಧೆ. ಅಕಾಲ ಭೋಜನ. ಹೊಸ ಸಮಸ್ಯೆಗಳು. ಶುಭಸಂಖ್ಯೆ: 4

ಕುಂಭ: ಅಧಿಕ ಖರ್ಚು. ಆದರೆ ಅಲ್ಪ ಆದಾಯ. ಎಲ್ಲಿ ಹೋದರೂ ಅಶಾಂತಿಯೇ ಕಾಣಲಿದೆ. ಕೆಲಸ ಕಾರ್ಯಗಳಲ್ಲಿ ಕಲಹ. ಶುಭಸಂಖ್ಯೆ: 6

ಮೀನ: ಭೂಮಿ ಲಾಭದ ಯೋಗವಿದೆ. ಮಾತಾಪಿತರಲ್ಲಿ ವಾತ್ಸಲ್ಯ. ಆಕಸ್ಮಿಕ ಧನಲಾಭ. ಪರರಿಂದ ಸಹಾಯ ಸಿಕ್ಕು ಮನಸ್ಸಿಗೆ ಶಾಂತಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net