ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸ

Nitya-Bhavishya-vvani-1-2-1
Published on

ಮೇಷ: ಸಾರ್ವಜನಿಕವಾಗಿ ಮನ್ನಣೆ. ಹೊರಜಗತ್ತಿನ ಕಗ್ಗಂಟು ಬಿಡಿಸುವ ಶಕ್ತಿ ನಿಮ್ಮಲ್ಲಿದೆ. ಕುಟುಂಬ ದೊಂದಿಗೆ ಸಮಯ ಕಳೆಯಿರಿ. ಶುಭಸಂಖ್ಯೆ: 1

ವೃಷಭ: ಅನಾರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಬಾಳಸಂಗಾತಿಯೊಂದಿಗೆ ತಾಳ್ಮೆಯಿರಲಿ. ಆಸ್ತಿ ವಿವಾದದಲ್ಲಿ ದುಡುಕಬೇಡಿ. ಶುಭಸಂಖ್ಯೆ: 7

ಮಿಥುನ: ಮಕ್ಕಳ ಹೊಸ ವಿಚಾರಕ್ಕೆ ಪೋ›ತ್ಸಾಹ ನೀಡಿ. ಕುಟುಂಬದಿಂದ ಅನವಶ್ಯಕ ಧನವ್ಯಯ. ಹಳೆಯ ಸ್ನೇಹಿತನ ಮನೆಗೆ ಭೇಟಿ. ಶುಭಸಂಖ್ಯೆ: 3

ಕಟಕ: ನಿಮ್ಮ ದುಡುಕು ಸ್ವಭಾವವನ್ನು ನಿಯಂತ್ರಿಸಿಕೊಳ್ಳಿ. ಗುರುಹಿರಿಯರ ಆಶೀರ್ವಾದ. ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸ. ಶುಭಸಂಖ್ಯೆ: 4

ಸಿಂಹ: ಬದಲಾವಣೆಗೆ ಒಗ್ಗಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಿ. ಹಲವು ರೀತಿಯ ಕಾರ್ಯದೊತ್ತಡ. ಅನಾರೋಗ್ಯ. ಶುಭಸಂಖ್ಯೆ: 3

ಕನ್ಯಾ: ಹೊಸ ವಸ್ತು ಖರೀದಿ. ಆದರೆ ಮೋಸ ಹೋಗುವ ಸಾಧ್ಯತೆಗಳಿವೆ. ಸಾರ್ವಜನಿಕ ಕ್ಷೇತ್ರದಲ್ಲಿ ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 2

ತುಲಾ: ನಿರೀಕ್ಷಿತ ಕಾರ್ಯ ಇಂದು ಸಂಪನ್ನ ವಾಗಲಿದೆ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ವೈದ್ಯರ ಸಲಹೆಯನ್ನು ಪಾಲಿಸಿ. ಶುಭಸಂಖ್ಯೆ: 6

ವೃಶ್ಚಿಕ: ಜೀವನದ ಸಮಸ್ಯೆಗಳಿಗೆ ಹಿರಿಯರಿಂದ ಪರಿಹಾರ. ಬೇರೆಯವರ ಅಭಿಪ್ರಾಯಗಳಿಗೆ ಬೆಲೆ ಕೊಡಿ. ದಿನಾಂತ್ಯಕ್ಕೆ ಶುಭವಾರ್ತೆ. ಶುಭಸಂಖ್ಯೆ: 3

ಧನಸ್ಸು: ಸಾರ್ವಜನಿಕ ರಂಗದಲ್ಲಿ ಆತ್ಮವಿಶ್ವಾಸದಿಂದ ವರ್ತಿಸಿ. ಕಲಾವಿದರಿಗೆ ವಿಶೇಷ ಅವಕಾಶ. ಅನಿರೀಕ್ಷಿತ ಧನಲಾಭ ಸಾಧ್ಯತೆ. ಶುಭಸಂಖ್ಯೆ: 5

ಮಕರ: ನಿಮ್ಮ ಹಲವು ಕೆಲಸಗಳಲ್ಲಿ ವಿಫಲತೆ. ಜವಾಬ್ದಾರಿ ನಿರ್ವಹಿಸುವಲ್ಲಿ ಗೊಂದಲ. ದೊಡ್ಡ ಮೊತ್ತದ ನಷ್ಟ ಉಂಟಾಗಬಹುದು. ಶುಭಸಂಖ್ಯೆ: 7

ಕುಂಭ: ನಿಮ್ಮ ಪ್ರಾಮಾಣಿಕತೆಯ ಬಗ್ಗೆ ಸ್ನೇಹಿತರ ಪ್ರಶಂಸೆ. ಪತ್ನಿಯೊಂದಿಗೆ ವಿಹಾರ. ರಾಜಕೀಯದಲ್ಲಿ ಯಶಸ್ಸು ದೊರೆಯುವುದು. ಶುಭಸಂಖ್ಯೆ: 9

ಮೀನ: ದೀನದರಿದ್ರರಿಗೆ ಸಹಾಯ ಮಾಡಿ. ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ ನೀಡುವಿರಿ. ಮನೆಯಲ್ಲಿ ಸಡಗರ. ಶುಭಸಂಖ್ಯೆ: 6

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net