ದಿನ ಭವಿಷ್ಯ: ಈ ರಾಶಿಯ ವ್ಯಾಪಾರಸ್ಥರಿಗೆ ಲಾಭದಾಯಕ ದಿನ

Nitya-Bhavisya-FILEminimizer-2
Published on

ಮೇಷ: ಆಸ್ತಿ ವಿಚಾರದ ಮಾತುಕತೆ ಸೌಹಾರ್ದದಿಂದ ನಡೆಯಲಿದೆ. ಉದ್ಯೋಗದಲ್ಲಿ ಲಾಭವಿದೆ. ಮಕ್ಕಳಿಂದ ಶುಭವಾರ್ತೆ ಬರಲಿದೆ. ಶುಭಸಂಖ್ಯೆ: 8

ವೃಷಭ: ಆರೋಗ್ಯದ ಕಡೆ ಗಮನವಿರಲಿ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಡೀತು. ಸಮಾದಾನ ದಿಂದಿರಿ. ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 5

ಮಿಥುನ: ಹಿರಿಯರ ಆರೋಗ್ಯದಲ್ಲಿ ತೊಂದರೆ. ಮನೆಗೆ ಆತ್ಮೀಯರ ಆಗಮನ. ವ್ಯಾಪಾರಸ್ಥರಿಗೆ ಲಾಭದಾಯಕ ದಿನ. ಶುಭಸಂಖ್ಯೆ: 1

ಕಟಕ: ವ್ಯರ್ಥ ಕಾಲಹರಣ. ನ್ಯಾಯಾಲಯದಲ್ಲಿ ಜಯ ನಿಮ್ಮ ಕಡೆಗಿದೆ. ಮಕ್ಕಳ ವಿಚಾರದಲ್ಲಿ ವಿಶೇಷ ಗಮನವಿರಲಿ. ಶುಭಸಂಖ್ಯೆ: 7

ಸಿಂಹ: ಉದ್ಯೋಗದಲ್ಲಿ ಬದಲಾವಣೆ. ಹೊಸ ಉದ್ಯೋಗದ ಸಾಧ್ಯತೆ. ದಂಪತಿಗಳ ಮಧ್ಯೆ ಸಾಮರಸ್ಯ. ದೇವರನ್ನು ಭಜಿಸಿ. ಶುಭಸಂಖ್ಯೆ:3

ಕನ್ಯಾ: ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ. ನೀರಿನಿಂದ ಅಪಾಯವಾದೀತು ಜಾಗ್ರತೆ. ಪ್ರಯಾಣದಲ್ಲಿ ಎಚ್ಚರದಿಂದಿರಿ. ಶುಭಸಂಖ್ಯೆ: 2

ತುಲಾ: ಹಣಕಾಸಿನ ಮುಗ್ಗಟ್ಟು ಕಾಡಬಹುದು. ಸ್ನೇಹಿತರ ಮಧ್ಯೆ ಕಲಹವಾಗಬಹುದು. ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ಶುಭಸಂಖ್ಯೆ:9

ವೃಶ್ಚಿಕ: ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ. ಪುಸ್ತಕ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಶುಭಸಂಖ್ಯೆ: 5

ಧನಸ್ಸು: ಮಾನಸಿಕ ಒತ್ತಡವು ಹೆಚ್ಚಬಹುದು. ಸಾಕುಪ್ರಾಣಿಗಳಿಂದ ತೊಂದರೆಯಾದೀತು. ದೂರ ಪ್ರಯಾಣದ ಸಾಧ್ಯತೆ ಇದೆ. ಶುಭಸಂಖ್ಯೆ: 8

ಮಕರ: ಅವಿವಾಹಿತರಿಗೆ ಶುಭ ಸುದ್ದಿ. ವಿದ್ಯಾರ್ಥಿಗಳಿಗೆ ಪ್ರಗತಿ. ವ್ಯವಹಾರದಿಂದ ನಷ್ಟ. ಹಿತ ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ಶುಭಸಂಖ್ಯೆ: 6

ಕುಂಭ: ಕಚೇರಿಯಲ್ಲಿ ಅಧಿಕಾರಿಗಳಿಂದ ಹೆಚ್ಚಿನ ಜವಾಬ್ದಾರಿ. ಮನೆಗೆ ಬಂಧುಮಿತ್ರರ ಆಗಮನ. ಕೃಷಿಕರಿಗೆ ಶುಭಫಲವಿದೆ. ಶುಭಸಂಖ್ಯೆ: 6

ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಶುಭ. ಪಶುಸಂಗೋಪನೆಯಿಂದ ಲಾಭ. ಹಾಲು-ಹಣ್ಣು ವ್ಯಾಪಾರಸ್ಥರಿಗೆ ಒಳ್ಳೆಯ ದಿನ. ಶುಭ ಸಂಖ್ಯೆ 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net