

ಮೇಷ: ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ದೂರ ಪ್ರಯಾಣ. ಆಲಸ್ಯ. ಪಟ್ಟು ಬಿಡದೆ ಹಿಡಿದ ಕೆಲಸ ಮಾಡುವಿರಿ. ಶುಭಸಂಖ್ಯೆ: 9.
ವೃಷಭ: ಕೃಷಿಕರಿಗೆ ಅಲ್ಪ ಲಾಭ, ವಿಪರೀತ ಖರ್ಚು. ಅತಿಯಾದ ನಿದ್ರೆ, ಅನಾರೋಗ್ಯ. ಮಹಿಳೆಯರಿಗೆ ತೊಂದರೆ ಸಾಧ್ಯತೆ. ಶುಭಸಂಖ್ಯೆ: 6
ಮಿಥುನ: ಪ್ರೀತಿ ಪಾತ್ರರೊಡನೆ ಸೌಹಾರ್ದಯುತ ಮಾತುಕತೆ, ನಾನಾ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಶುಭಸಂಖ್ಯೆ: 8
ಕಟಕ: ಅವಿವಾಹಿತರಿಗೆ ವಿಶೇಷ ದಿನ. ಸ್ವಂತ ಪರಿಶ್ರಮದಿಂದ ಅಭಿವೃದ್ಧಿ. ಹಳೆಯ ಸಾಲ ಮರುಪಾವತಿ. ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ: 7
ಸಿಂಹ: ಹಿರಿಯರಲ್ಲಿ ಭಕ್ತಿ. ಆರೋಗ್ಯದಲ್ಲಿ ಏರುಪೇರು. ಇತರರ ಮಾತಿನಿಂದ ಕಲಹ. ಹಿತಶತ್ರುಗಳಿಂದ ತೊಂದರೆ ಉಂಟಾದೀತು. ಶುಭಸಂಖ್ಯೆ: 3
ಕನ್ಯಾ: ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ. ವಿವಾಹ ಕಾರ್ಯಗಳಲ್ಲಿ ಭಾಗಿ. ಆರೋಗ್ಯ ವೃದ್ಧಿ. ಇಷ್ಟಾರ್ಥಸಿದ್ಧಿಯಾಗುವುದು. ಶುಭಸಂಖ್ಯೆ: 2
ತುಲಾ: ಕೃಷಿ ಉಪಕರಣಗಳ ಖರೀದಿ. ಅಲಂಕಾರಿಕ ವಸ್ತುಗಳ ಮಾರಾಟದಿಂದ ಲಾಭ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ. ಶುಭಸಂಖ್ಯೆ: 9
ವೃಶ್ಚಿಕ: ನಗದು ವ್ಯವಹಾರಗಳಲ್ಲಿ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ. ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು. ಶುಭಸಂಖ್ಯೆ: 7
ಧನಸ್ಸು: ಹಿರಿಯರಿಂದ ವ್ಯವಹಾರಗಳು ಸುಗಮ. ಮನಃಶಾಂತಿ. ಶತ್ರು ಬಾಧೆ ಕಾಡೀತು. ಸಂಬಂಧಿಗಳಿಂದ ತೊಂದರೆಯಾಗಲಿದೆ. ಶುಭಸಂಖ್ಯೆ:5
ಮಕರ: ಕೋರ್ಟ್ ವ್ಯವಹಾರಗಳಿಗಾಗಿ ಪ್ರಯಾಣ. ಚೋರಭಯ. ಅಧಿಕ ನಷ್ಟ. ಅಪಘಾತವಾಗುವ ಸಾಧ್ಯತೆ, ಎಚ್ಚರದಿಂದಿರಿ. ಶುಭಸಂಖ್ಯೆ: 3
ಕುಂಭ: ಮನೆಯಲ್ಲಿ ಶುಭಕಾರ್ಯದ ಸಡಗರ. ನಿವೇಶನ ಕೊಳ್ಳುವ ಸಂಭವ. ಸುಖ ಭೋಜನ. ಆರ್ಥಿಕ ಪರಿಸ್ಥಿತಿ ಉತ್ತಮ. ಶುಭಸಂಖ್ಯೆ: 1
ಮೀನ: ಹೆಚ್ಚಿದ ಜವಾಬ್ದಾರಿ. ಮಕ್ಕಳಿಂದ ಪ್ರೀತಿ. ಆದಾಯಕ್ಕೆ ತಕ್ಕ ಖರ್ಚು. ಉದ್ಯೋಗದಲ್ಲಿ ಅಭಿವೃದ್ಧಿ. ವಿದೇಶ ಪ್ರಯಾಣ. ಶುಭಸಂಖ್ಯೆ: 2