

ಮೇಷ: ಇತರರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಮಾಡುವುದು ಉತ್ತಮ. ವಾದ - ವಿವಾದಗಳನ್ನು ತಪ್ಪಿಸಬೇಕು. ಶುಭಸಂಖ್ಯೆ: 9
ವೃಷಭ: ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯಿಂದ ವರ್ತಿಸಿ. ಅತಿ ಆತ್ಮವಿಶ್ವಾಸ ಬೇಡ. ಶುಭಸಂಖ್ಯೆ: 7
ಮಿಥುನ: ಅನೇಕ ಅಚ್ಚರಿಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ಎಲ್ಲಾ ರೀತಿಯ ಬೆಂಬಲವನ್ನು ಪಡೆಯುತ್ತೀರಿ. ಸಂಪತ್ತು ವೃದ್ಧಿ. ಶುಭಸಂಖ್ಯೆ: 5
ಕಟಕ: ವೃತ್ತಿಜೀವನದ ಕಾಳಜಿ ಇರಲಿ. ದಿನನಿತ್ಯದ ಕೆಲಸದಲ್ಲಿ ಕೆಲವು ಬದಲಾವಣೆ. ಉದ್ಯೋಗದಾತರು, ವ್ಯಾಪಾರಿಗಳಿಗೆ ಶುಭದಿನ. ಶುಭಸಂಖ್ಯೆ: 1
ಸಿಂಹ: ಗಳಿಕೆ ಹೆಚ್ಚಾಗುತ್ತದೆ. ವೆಚ್ಚವನ್ನು ನಿಯಂತ್ರಿಸಿ ಕಾಪಾಡಿಕೊಳ್ಳಿ. ಸಕಾರಾತ್ಮಕ ಮನಸ್ಥಿತಿಯು ಬದಲಾವಣೆಗೆ ಕಾರಣ ಆಗುತ್ತದೆ. ಶುಭಸಂಖ್ಯೆ: 7
ಕನ್ಯಾ: ಹಿರಿಯ ಅಧಿಕಾರಿಗಳು ಸ್ವಲ್ಪ ಶಾಂತ ಮನಸ್ಥಿತಿಯಲ್ಲಿರುತ್ತಾರೆ. ನಿಮ್ಮೊಳಗಿನ ಪ್ರತಿಭೆಯನ್ನು ಪ್ರದರ್ಶಿಸಿ. ಆರ್ಥಿಕ ಚೇತರಿಕೆ. ಶುಭಸಂಖ್ಯೆ: 1
ತುಲಾ: ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನಿಮ್ಮ ಅನೇಕ ಸ್ಥಗಿತಗೊಂಡ ಕಾರ್ಯಗಳಿಗೆ ಇಂದು ಚಾಲನೆ. ವಿರೋಧಿಗಳ ಸೋಲು. ಶುಭಸಂಖ್ಯೆ: 2
ವೃಶ್ಚಿಕ: ಮನೆಯಲ್ಲಿ ಕಿರಿಯರಿಂದ ವಿವಾದಗಳು ಎದುರಾಗಬಹುದು. ಸಂಗಾತಿಯಿಂದ ಬೆಂಬಲ. ವೃತ್ತಿ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 8
ಧನಸ್ಸು: ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತೀರಿ. ಪ್ರಯತ್ನಗಳು ಯಶಸ್ವಿಯಾಗಲಿವೆ. ಇಂದಿನ ದಿನ ನಿಮಗೆ ಸವಾಲಿನ ದಿನ. ಶುಭಸಂಖ್ಯೆ: 3
ಮಕರ: ಹಣಕಾಸು ಸಮಸ್ಯೆಗಳು ತಲೆದೋರಲಿದೆ. ವ್ಯವಹಾರದಲ್ಲಿ ಬಹಳ ಜಾಗರೂಕರಾಗಿರಬೇಕು. ಕುಟುಂಬ ವರ್ಗದಲ್ಲಿ ತಳಮಳ. ಶುಭಸಂಖ್ಯೆ: 6
ಕುಂಭ: ವಿದ್ಯಾರ್ಥಿಗಳಿಗೆ, ಖಾಸಗಿ ಉದ್ಯೋಗಿಗಳಿಗೆ ಉತ್ತಮ ದಿನ. ಸಂಚಾರ ಯೋಗ. ಕೆಲಸದಲ್ಲಿ ಉದಾಸೀನತೆ ಎದುರಾಗಬಹುದು. ಶುಭಸಂಖ್ಯೆ: 3
ಮೀನ: ಒತ್ತಡಕ್ಕೆ ಒಳಗಾಗಬಹುದು. ಅತಿಯಾದ ಖರ್ಚನ್ನು ನಿಯಂತ್ರಿಸಲು ಕಷ್ಟವಾದೀತು. ಸ್ನೇಹಿತರ ಬೆಂಬಲದೊಂದಿಗೆ ಕಾರ್ಯಸಿದ್ದಿ. ಶುಭಸಂಖ್ಯೆ: 7