

ಮೇಷ: ಯತ್ನ ಕಾರ್ಯಾನುಕೂಲ. ರಿಯಲ್ ಎಸ್ಟೇಟ್ನವರಿಗೆ ಲಾಭ. ದ್ವಿಚಕ್ರವಾಹನದಿಂದ ಅಪಘಾತ ಸಾಧ್ಯತೆ, ಜಾಗ್ರತರಾಗಿರಿ. ಶುಭಸಂಖ್ಯೆ: 7
ವೃಷಭ: ಪ್ರಿಯ ಜನರ ಭೇಟಿ. ಅಲಂಕಾರಿಕ ವಸ್ತುಗಳಿಗೆ ಖರ್ಚು. ಚಂಚಲ ಮನಸ್ಸು. ವೃಥಾ ಅಲೆದಾಟ, ತಾಯಿಯ ಆರೋಗ್ಯದ ಬಗ್ಗೆ ನಿಗಾವಹಿಸಿ. ಶುಭಸಂಖ್ಯೆ: 8
ಮಿಥುನ: ಪ್ರಭಾವಿ ವ್ಯಕ್ತಿಗಳ ಭೇಟಿ ಮಾಡುವಿರಿ. ಆರೋಗ್ಯದಲ್ಲಿ ಏರುಪೇರು. ವಿವಾದಗಳಿಗೆ ಆಸ್ಪದ ಕೊಡಬೇಡಿ. ಆಲಸ್ಯ ಮನೋಭಾವ. ಶುಭಸಂಖ್ಯೆ: 6
ಕಟಕ: ಅಲ್ಪ ಕಾರ್ಯಸಿದ್ಧಿ. ಕ್ರಯವಿಕ್ರಯಗಳಲ್ಲಿ ಮೋಸವಾದೀತು. ಮಾತಾಪಿತೃಗಳಿಂದ ಹಿತವಚನ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:4
ಸಿಂಹ: ಕಾರ್ಯದಲ್ಲಿ ವಿಳಂಬ. ಶತ್ರು ಬಾಧೆಸಾಧ್ಯತೆ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಸ್ತಾಪ. ಮನಸ್ಸಿನಲ್ಲಿ ಭಯ ಭೀತಿ. ದೂರ ಪ್ರಯಾಣ. ಶುಭಸಂಖ್ಯೆ:1
ಕನ್ಯಾ: ಪರಿಶ್ರಮಕ್ಕೆ ತಕ್ಕ ವರಮಾನ. ವಿವಾಹ ಯೋಗವಿದೆ. ವ್ಯವಹಾರದಲ್ಲಿ ದೃಷ್ಟಿ ದೋಷ. ದಂಡ ಕಟ್ಟುವಿರಿ, ಮನಸ್ಸಿನಲ್ಲಿ ದುಗುಡ. ಶುಭಸಂಖ್ಯೆ: 7
ತುಲಾ: ಮಕ್ಕಳೊಡನೆ ನೆಮ್ಮದಿಯ ಜೀವನ. ಪಾಲುದಾರಿಕೆ ಯಲ್ಲಿ ಎಚ್ಚರ. ಹಿತಶತ್ರುಗಳಿಂದ ತೊಂದರೆ. ಅನ್ಯರಿಗೆ ಉಪಕಾರ ಮಾಡದಿರಿ. ಶುಭಸಂಖ್ಯೆ: 2
ವೃಶ್ಚಿಕ: ವಿರೋಧ ಕಟ್ಟಿಕೊಳ್ಳುವಿರಿ, ವಿನಾಕಾರಣ ಕೆಲವರಲ್ಲಿ ದ್ವೇಷ ಕಟ್ಟಿಕೊಳ್ಳುವಿರಿ. ಪರರ ಕೆಲಸಗಳಿಗಾಗಿ ಖರ್ಚು ಮಾಡುವ ಪರಿಸ್ಥಿತಿ. ಶುಭ ಸಂಖ್ಯೆ 8
ಧನಸ್ಸು: ದೈವಿಕ ಚಿಂತನೆ. ಕೈಹಾಕಿದ ಕೆಲಸಗಳಲ್ಲಿ ಜಯ. ವಿದೇಶ ಪ್ರಯಾಣ ಸಾಧ್ಯತೆ. ಅನ್ಯ ಜನರಲ್ಲಿ ವೈಮನಸ್ಸು. ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ಶುಭಸಂಖ್ಯೆ: 7
ಮಕರ: ಹಿತಶತ್ರುಗಳಿಂದ ತೊಂದರೆ. ಹಣಕಾಸಿನ ಅಡಚಣೆ. ಕಾರ್ಯದಲ್ಲಿ ವಿಳಂಬ. ಸ್ಥಿರಾಸ್ತಿ ಮಾರಾಟ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಶುಭಸಂಖ್ಯೆ: 3
ಕುಂಭ: ಕಾರ್ಯ ಬದಲಾವಣೆ. ವಿದ್ಯೆಯಲ್ಲಿ ಆಸಕ್ತಿ. ನೀಚ ಜನರ ಸಹವಾಸ. ಅಕಾಲ ಭೋಜನ. ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ:1
ಮೀನ: ದಾನ ಧರ್ಮದಲ್ಲಿ ಆಸಕ್ತಿ. ಮಾತಿನ ಮೇಲೆ ಹಿಡಿತವಿರಲಿ. ಕೃಷಿಯಲ್ಲಿ ಪ್ರಗತಿ. ಕಚೇರಿಯಲ್ಲಿ ಹೆಚ್ಚಿದ ಜವಾಬ್ದಾರಿ, ವಿಶೇಷ ಕಾರ್ಯ. ಶುಭಸಂಖ್ಯೆ: 9