ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ದೂರದ ವ್ಯವಹಾರ ಗಳಿಂದ ಧನಾರ್ಜನೆ

astrology
Published on

ಮೇಷ: ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಕಾರ್ಯನಿರ್ವಹಿಸಿದರೆ ಯಶಸ್ಸು ನಿಮ್ಮದಾಗುವುದು. ಉದ್ಯೋಗದಲ್ಲಿ ಶ್ರಮ ಅಧಿಕ. ಶುಭಸಂಖ್ಯೆ: 8

ವೃಷಭ: ಬರಹಗಾರರಿಗೆ, ಆಹಾರೋದ್ಯಮಿಗಳಿಗೆ, ಪಾಲುದಾರಿಕಾ ವ್ಯವಹಾರಸ್ಥರಿಗೆ ಅನುಕೂಲಕರ. ಉನ್ನತ ಅಧಿಕಾರಕ್ಕಾಗಿ ಶ್ರಮ. ಶುಭಸಂಖ್ಯೆ: 9

ಮಿಥುನ: ಸಂಶಯಕ್ಕೆ ಅವಕಾಶ ಕೊಡದೇ ಕಾರ್ಯ ಕ್ಷೇತ್ರದಲ್ಲಿ ಯಶಸ್ಸಿಗೆ ಪ್ರಯತ್ನಿಸಿ. ಸ್ಥಿರವಾದ ಧನಸಂಪತ್ತು. ಆರೋಗ್ಯದತ್ತ ಗಮನಹರಿಸಿ. ಶುಭಸಂಖ್ಯೆ: 2

ಕಟಕ: ಅಧಿಕ ದೈಹಿಕ ಶ್ರಮ. ಧನಾರ್ಜನೆ. ಅಧ್ಯಯನ, ಉದ್ಯೋಗ, ಸ್ಥಾನ ಗೌರವ ವಿಚಾರದಲ್ಲಿ ಅಭಿವೃದ್ಧಿ. ಚರ್ಚೆಗೆ ಆಸ್ಪದ ಬೇಡ. ಶುಭಸಂಖ್ಯೆ: 5

ಸಿಂಹ: ದೈಹಿಕ ಮಾನಸಿಕ ಒತ್ತಡವಿದ್ದರೂ ಕಾರ್ವಿುಕ ವರ್ಗ ದವರಿಂದ ಸಹಾಯ ಲಭಿಸಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಒದಗುವುದು. ಶುಭಸಂಖ್ಯೆ: 6

ಕನ್ಯಾ: ಉತ್ತಮ ಧನಾರ್ಜನೆ ಇದ್ದರೂ ವಿಚಾರಿಸಿ ಕಾರ್ಯ ನಿರ್ವಹಿಸಿ. ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಪಾಲುದಾರಿಕಾ ಕ್ಷೇತ್ರದಲ್ಲಿ ಬದಲಾವಣೆ. ಶುಭಸಂಖ್ಯೆ: 8

ತುಲಾ: ಸ್ವಂತ ಪರಿಶ್ರಮ ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯ ವೈಖರಿಯಲ್ಲಿ ಸಫಲತೆ. ಗಣ್ಯರಿಂದ ಮನ್ನಣೆ. ಸಾಂಸಾರಿಕ ಸುಖ ವೃದ್ಧಿ. ಶುಭಸಂಖ್ಯೆ: 1

ವೃಶ್ಚಿಕ: ಧೈರ್ಯ, ಪರಾಕ್ರಮ, ಆತ್ಮಸ್ಥೈರ್ಯದಿಂದ ಕೂಡಿದ ಚಟುವಟಿಕೆ. ಸ್ವಾಭಿಮಾನ ಗುಣದಿಂದ ಗೌರವ. ಸಣ್ಣ ಸಂಚಾರ ಸಂಭವ. ಶುಭಸಂಖ್ಯೆ: 3

ಧನಸ್ಸು: ಪ್ರಯಾಣದಿಂದ ದೇಹಾಯಾಸ. ದೂರದ ವ್ಯವಹಾರ ಗಳಿಂದ ಧನಾರ್ಜನೆ. ಅಧ್ಯಯನ ಪ್ರವೃತ್ತಿಯವರಿಗೆ ಉತ್ತಮ ವಾತಾವರಣ. ಶುಭಸಂಖ್ಯೆ: 4

ಮಕರ: ಹಣಕಾಸಿನ ವಿಚಾರದಲ್ಲಿ ಪ್ರಗತಿ. ಚತುರತೆಯಿಂದ ವ್ಯವಹರಿಸುವಿರಿ. ಅನ್ಯರಿಂದ ಸಹಾಯ ನಿರೀಕ್ಷಿಸಬೇಡಿ. ದೇವರನ್ನು ಸ್ಮರಿಸಿ. ಶುಭಸಂಖ್ಯೆ: 2

ಕುಂಭ: ವ್ಯವಹಾರಗಳಲ್ಲಿ ಅಧಿಕ ಲಾಭವಾದರೂ ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ತಿಳಿದು ನಿರ್ಣಯಿಸಿ. ಶುಭಸಂಖ್ಯೆ: 9

ಮೀನ: ಮಾನಸಿಕ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಿ. ಅನಗತ್ಯ ವಿಚಾರಗಳಿಗೆ ಒಲವು ತೋರದಿರಿ. ಧಾರ್ವಿುಕ ವಿಚಾರದಲ್ಲಿ ಆಸಕ್ತಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net