

ಮೇಷ: ಬಾಳ ಸಂಗಾತಿಯ ಸಲಹೆ ತೆಗೆದುಕೊಳ್ಳಿ.ಅನಿರೀಕ್ಷಿತ ಅತಿಥಿಗಳ ಆಗಮನ. ಸಂತೋಷ ಕೂಟದಲ್ಲಿ ಭಾಗವಹಿಸುವಿರಿ. ಶುಭಸಂಖ್ಯೆ: 5
ವೃಷಭ: ಹಿತಶತ್ರುಗಳ ಉಪಟಳ ಹೆಚ್ಚಾಗಬಹುದು. ಸಹೋದರರಿಂದ ಸಹಾಯ ದೊರೆಯುತ್ತದೆ. ಸಂಜೆಯ ಹೊತ್ತಿಗೆ ಶುಭಸುದ್ದಿ. ಶುಭಸಂಖ್ಯೆ: 3
ಮಿಥುನ: ಮಕ್ಕಳ ವಿಷಯದಲ್ಲಿ ಹೆಮ್ಮೆ. ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಸಂತಸ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಶುಭಸಂಖ್ಯೆ: 2
ಕಟಕ: ಮನೆಗೆ ಸಂಬಂಧಿಸಿ ಮಹತ್ವದ ನಿರ್ಧಾರಕ್ಕೆ ಚಾಲನೆ ಕೊಡುವಿರಿ. ಮೇಲಧಿಕಾರಿಗಳು ನಿಮಗೆ ವಿಶೇಷ ಜವಾಬ್ದಾರಿ ನೀಡುವರು. ಶುಭಸಂಖ್ಯೆ: 7
ಸಿಂಹ: ಅಕ್ಕ ತಂಗಿಯರ ಬಾಂಧವ್ಯವನ್ನು ಹಠದಿಂದ ಹಾಳು ಮಾಡಿಕೊಳ್ಳಬೇಡಿ. ಅತಿಥಿಗಳನ್ನು ದೇವೋಭಾವದಿಂದ ಸತ್ಕರಿಸಿ. ಶುಭಸಂಖ್ಯೆ: 9
ಕನ್ಯಾ: ಕುಂಟುಂಬದಲ್ಲಿ ಸಂಭ್ರ್ರು ಸಡಗರ. ಹಣದ ಸಮಸ್ಯೆ ಉಂಟಾಗಬಹುದು. ದಿನಾಂತ್ಯದಲ್ಲಿ ಧನಾಗಮವಾಗಿ ಸಂತಸ. ಶುಭಸಂಖ್ಯೆ: 6
ತುಲಾ: ನಿಮ್ಮನ್ನು ಕಾಡುತ್ತಿರುವ ಸಮಸ್ಯೆಗೆ ಸ್ನೇಹಿತರಿಂದ ಪರಿಹಾರ ಸಿಗಲಿದೆ. ಕಲಾವಿದರಿಗೆ ಸಂತೋಷ ನೀಡುವ ದಿನ. ಶುಭಸಂಖ್ಯೆ: 3
ವೃಶ್ಚಿಕ: ನ್ಯಾಯಾಲಯದ ಆದೇಶದ ನಿರೀಕ್ಷೆ, ನಿರಾಸೆ. ಅನಾರೋಗ್ಯದ ಸಮಸ್ಯೆ. ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ. ಶುಭಸಂಖ್ಯೆ: 8
ಧನಸ್ಸು: ಮಾತಿನ ಬಗ್ಗೆ ನಿಗಾ ಇದ್ದಷ್ಟೂ ಒಳ್ಳೆಯದು. ಹಿತಶತ್ರುಗಳ ಅಪಪ್ರಚಾರದಿಂದ ಬೇಸರ. ದಿನಾಂತ್ಯದಲ್ಲಿ ಶುಭ ವಾರ್ತೆ. ಶುಭಸಂಖ್ಯೆ: 5
ಮಕರ: ಹಣದ ಅಪವ್ಯಯ. ನಿರೀಕ್ಷೆಯಲ್ಲಿ ಇದ್ದ ಹಣ ಬರದೇ ಇರಬಹುದು. ಅಭ್ಯಾಗತರ ಆಗಮನ. ಮನೆಯಲ್ಲಿ ಸಂತಸ. ಶುಭಸಂಖ್ಯೆ: 2
ಕುಂಭ: ಕೋಪವನ್ನು ನಿಯಂತ್ರಿಸಿಕೊಳ್ಳಿ. ವ್ಯೆದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ. ಮಕ್ಕಳ ಅಗತ್ಯಗಳಿಗಾಗಿ ಖರ್ಚು. ಶುಭಸಂಖ್ಯೆ: 9
ಮೀನ: ಅವಸರದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ನೂರು ಸಲ ಯೋಚಿಸಿ. ಅನಿರೀಕ್ಷಿತ ಧನಾಗಮ ಸಾಧ್ಯತೆ. ಸಮಾಧಾನ. ಶುಭಸಂಖ್ಯೆ: 3
| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ