ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಹಿತಶತ್ರುಗಳ ಉಪಟಳ ಜಾಸ್ತಿಯಾಗಬಹುದು

Nitya-Bhavishya-vvani-1-2-1-1
Published on

ಮೇಷ: ಬಾಳಸಂಗಾತಿಯ ಸಲಹೆ ತೆಗೆದುಕೊಳ್ಳಿ. ಅನಿರೀಕ್ಷಿತ ಅತಿಥಿಗಳ ಆಗಮನ. ಸಂತೋಷ ಕೂಟದಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 5

ವೃಷಭ: ಹಿತಶತ್ರುಗಳ ಉಪಟಳ ಜಾಸ್ತಿಯಾಗಬಹುದು. ಸಹೋದರರಿಂದ ಸಹಾಯ. ದಿನಾಂತ್ಯದಲ್ಲಿ ಶುಭಸುದ್ದಿ ಬರಲಿದೆ. ಶುಭಸಂಖ್ಯೆ: 3

ಮಿಥುನ: ಮಕ್ಕಳ ವಿಷಯದಲ್ಲಿ ಹೆಮ್ಮೆ. ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಸಂತಸದ ಸುದ್ದಿ. ಆರೋಗ್ಯದ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 2

ಕಟಕ: ಮನೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಕ್ಕೆ ಚಾಲನೆ ದೊರೆಯಲಿದೆ. ಮೇಲಧಿಕಾರಿಗಳಿಂದ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 7

ಸಿಂಹ: ಅಕ್ಕ ತಂಗಿಯರ ಬಾಂಧವ್ಯವನ್ನು ನಿಮ್ಮ ಹಠದಿಂದ ಹಾಳು ಮಾಡಿಕೊಳ್ಳಬೇಡಿ. ಸೌಹಾರ್ದ ಮುಖ್ಯ. ಅತಿಥಿಗಳನ್ನು ಸತ್ಕರಿಸಿ. ಶುಭಸಂಖ್ಯೆ: 9

ಕನ್ಯಾ; ಕುಟುಂಬದಲ್ಲಿ ಸಂಭ್ರಮ, ಸಡಗರ. ಹಣದ ಸಮಸ್ಯೆ ಉಂಟಾಗಬಹುದು. ದಿನಾಂತ್ಯದಲ್ಲಿ ಧನಾಗಮ ಸಾಧ್ಯತೆ. ಶುಭಸಂಖ್ಯೆ: 6

ತುಲಾ: ನಿಮ್ಮ ಸಮಸ್ಯೆಗೆ ಸ್ನೇಹಿತರಿಂದ ಪರಿಹಾರ ದೊರೆತು ಸಮಾಧಾನ. ಕಲಾವಿದರಿಗೆ ವಿಶೇಷ ಕಾರ್ಯಕ್ರಮದ ಸಂತಸ. ಶುಭಸಂಖ್ಯೆ: 3

ವೃಶ್ಚಿಕ: ನ್ಯಾಯಾಲಯದ ಆದೇಶದ ನಿರೀಕ್ಷೆ, ನಿರಾಸೆ. ಅನಾರೋಗ್ಯದ ಸಮಸ್ಯೆ ಉಲ್ಬಣ. ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ. ಶುಭಸಂಖ್ಯೆ: 8

ಧನಸ್ಸು: ಮಾತಿನ ಬಗ್ಗೆ ನಿಗಾ ಇರಲಿ. ಹಿತಶತ್ರುಗಳಿಂದ ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳಬೇಡಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 5

ಮಕರ: ಹಣದ ಅಪವ್ಯಯ ಆಗದಂತೆ ನೋಡಿಕೊಳ್ಳಿ. ನಿರೀಕ್ಷೆಯಲ್ಲಿ ಇದ್ದ ಹಣ ಬರಲಿಕ್ಕಿಲ್ಲ. ಅಭ್ಯಾಗತರ ಆಗಮನ. ಸಂತಸ. ಶುಭಸಂಖ್ಯೆ: 2

ಕುಂಭ: ಕೋಪವನ್ನು ನಿಯಂತ್ರಿಸಿಕೊಳ್ಳಿ. ಅದು ವಿವೇಕವನ್ನು ಮರೆಸುತ್ತದೆ. ವ್ಯೆದ್ಯರ ಸಲಹೆ ಪಾಲಿಸಿ. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 9

ಮೀನ: ಅವಸರದಲ್ಲಿ ನಿರ್ಧಾರ ಕೈಗೊಳ್ಳುವ ಬದಲು ನೂರು ಸಲ ಯೋಚಿಸಿ ತೀರ್ವನಕ್ಕೆ ಬನ್ನಿ. ಅನಿರೀಕ್ಷಿತ ಧನಾಗಮ ಸಾಧ್ಯತೆ. ಶುಭಸಂಖ್ಯೆ: 3

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net