ದಿನ ಭವಿಷ್ಯ: ಈ ರಾಶಿಯರಿಗೆ ಇಂದು ಉದ್ದೇಶಿತ ಕಾರ್ಯದಲ್ಲಿ ವಿಘ್ನ

Nitya-Bhavishya-vvani-1-2-1-1
Published on

ಮೇಷ: ಪತ್ನಿಯೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ. ವಿವಾಹದ ಪ್ರಯತ್ನದಲ್ಲಿ ಸಕಾರಾತ್ಮಕ ಫಲಿತಾಂಶ. ಮಗಳಿಂದ ಶುಭ ಸುದ್ದಿ. ಶುಭಸಂಖ್ಯೆ: 9

ವೃಷಭ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆಯಿಂದ ಬಗೆಹರಿಸಿಕೊಳ್ಳಿ. ಬಂಧುವರ್ಗದಲ್ಲಿ ವಿರಸ. ಶುಭಸಂಖ್ಯೆ: 6

ಮಿಥುನ: ಮಕ್ಕಳ ಭವಿಷ್ಯದ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳಿ. ಅತಿಥಿ ಸತ್ಕಾರದಿಂದ ಸಮಾಧಾನ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 6

ಕಟಕ: ಬಹಳ ದಿನಗಳಿಂದ ನಿರೀಕ್ಷೆಯಲ್ಲಿ ಇದ್ದ ಭೂ ಖರೀದಿಗೆ ಚಾಲನೆ. ತಾಯಿಯ ಮಾರ್ಗದರ್ಶನ ಪಾಲಿಸಿ. ಬಂಧುಗಳ ಭೇಟಿ. ಶುಭಸಂಖ್ಯೆ: 1

ಸಿಂಹ: ಸಹೋದರಿ ಮನೆಯಲ್ಲಿ ಭೋಜನ. ಸಹೋದರರೊಂದಿಗೆ ತಾಳ್ಮೆಯಿಂದ ವರ್ತಿಸಿ. ಜವಾಬ್ದಾರಿಯ ಕೆಲಸದ ಹೊಣೆ . ಶುಭಸಂಖ್ಯೆ: 8

ಕನ್ಯಾ: ಮಹತ್ವದ ನಿರ್ಣಯ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಲಿದೆ. ನಿಮ್ಮ ಮಾತಿನಿಂದ ಶತ್ರುಗಳು ಸೃಷ್ಟಿ. ಜೋಕೆ. ಶುಭಸಂಖ್ಯೆ: 7

ತುಲಾ: ಉದ್ದೇಶಿತ ಕಾರ್ಯದಲ್ಲಿ ವಿಘ್ನ. ನಿಮ್ಮ ಕಲೆಯ ಅನಾವರಣಕ್ಕೆ ಒಳ್ಳೆಯ ಅವಕಾಶ. ದಿನಾಂತ್ಯದಲ್ಲಿ ಹಿತೈಷಿಗಳ ಭೆೇಟಿ. ಶುಭಸಂಖ್ಯೆ: 6

ವೃಶ್ಚಿಕ: ಯಾವುದೇ ಕೆಲಸದಲ್ಲಿ ಚುರುಕುತನವಿಲ್ಲ. ಸೋಮಾರಿತನ ಬಿಟ್ಟರೆ ಮಾತ್ರ ಉತ್ತಮ ಭವಿಷ್ಯ. ಸಹೋದರಿಯಿಂದ ಸಾಂತ್ವನ. ಶುಭಸಂಖ್ಯೆ: 4

ಧನಸ್ಸು: ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೈದ್ಯರ ಮಾತು ಮೀರಬೇಡಿ. ಉತ್ತಮ ಅನ್ನಪಾನ. ದಿನಾಂತ್ಯದಲ್ಲಿ್ಲ ಸಂತಸ. ಶುಭಸಂಖ್ಯೆ: 6

ಮಕರ: ಪಂಚಗ್ರಹ ಯೋಗದಲ್ಲಿದ್ದೀರಿ. ಗೊಂದಲಗಳು ಸಹಜ. ಯಾವುದೇ ಸಂಗತಿಯಿಂದ ಧೃತಿಗೆಡಬೇಡಿ. ಈಶ್ವರನ ಆರಾಧಿಸಿ. ಶುಭಸಂಖ್ಯೆ: 7

ಕುಂಭ: ಮನಸ್ಸಿಗೆ ಕ್ಲೇಶ. ಮನೆಯಲ್ಲಿ ಅವಮಾನ ಎದುರಿಸಬೇಕಾದೀತು. ನಟನಾ ವೃತ್ತಿಯವರಿಗೆ ವಿಪುಲ ಅವಕಾಶ ಲಭ್ಯ. ಶುಭಸಂಖ್ಯೆ: 6

ಮೀನ: ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಮನಸ್ಸಿಗೆ ಸಮಾಧಾನ ಸಿಗುತ್ತದೆ. ಖರೀದಿಯಲ್ಲಿ ವಿಶೇಷ ವಸ್ತು ಪ್ರಾಪ್ತಿ. ಶುಭಸಂಖ್ಯೆ: 7

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net