ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಸ್ನೇಹಿತರಿಂದ ಅರ್ಥಿಕ ಸಹಾಯ ಸಿಗುವುದು

astrology
Published on

ಮೇಷ: ಗರ್ಭಿಣಿಯರು ಎಚ್ಚರಿಕೆಯಿಂದ ಇರಿ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ ಜಾಸ್ತಿಯಾದೀತು. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9

ವೃಷಭ: ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ ಮಾಡಬೇಕಾಗಬಹುದು. ದಾಂಪತ್ಯ ಸಮಸ್ಯೆ ಉಲ್ಬಣ. ಮಾತಿನಿಂದ ತೊಂದರೆ. ಶುಭಸಂಖ್ಯೆ: 5

ಮಿಥುನ: ಶುಭಕಾರ್ಯ ರದ್ದಾಗುವ ಸಂಭವ. ಸ್ನೇಹಿತರು ದೂರ. ಉನ್ನತ ಅಧಿಕಾರಿಗಳಿಂದ ಅಂತರ ಕಾಯ್ದುಕೊಳ್ಳುವಿರಿ. ಶುಭಸಂಖ್ಯೆ: 7

ಕಟಕ: ಬಹುಮಾನ ರೂಪದಲ್ಲಿ ಹಣ ಪ್ರಾಪ್ತಿ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ. ಶುಭಸಂಖ್ಯೆ: 8

ಸಿಂಹ: ದೂರ ಪ್ರಯಾಣ ಮಾಡುವ ಅವಕಾಶ, ದೂರ ಪ್ರದೇಶಕ್ಕೆ ತೆರಳಲು ಮಾನ್ಯತೆ. ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಶುಭಸಂಖ್ಯೆ: 2

ಕನ್ಯಾ: ಉದ್ಯೋಗದಲ್ಲಿ ಧನಲಾಭ. ಕೆಲಸ ಕಾರ್ಯಗಳಲ್ಲಿ ಜಯ. ಶತ್ರು ದಮನ. ಋಣ ರೋಗ ಭಾದೆಗಳಿಂದ ಮುಕ್ತಿ. ಶುಭಸಂಖ್ಯೆ:1

ತುಲಾ: ಅಧಿಕಾರಿಗಳಿಗೆ ಸೂಚನೆ ಪಾಲಿಸದೆ ನಷ್ಟ. ದಾಂಪತ್ಯ ಸಮಸ್ಯೆ ಅಧಿಕ. ಗುರು ಹಿರಿಯರ ಸಲಹೆಯಂತೆ ವಿವಾದ ಇತ್ಯರ್ಥ. ಶುಭಸಂಖ್ಯೆ:5

ವೃಶ್ಚಿಕ: ನಷ್ಟದ ಪ್ರಮಾಣ ಅಧಿಕ. ಬಡ್ತಿ ಮತ್ತು ಪ್ರಶಂಸೆ. ತಂದೆಯಿಂದ ಅನುಕೂಲ. ಸ್ನೇಹಿತರಿಂದ ಅರ್ಥಿಕ ಸಹಾಯ ಸಿಗುವುದು. ಶುಭಸಂಖ್ಯೆ: 6

ಧನಸ್ಸು: ಸ್ವಂತ ಉದ್ಯಮದವರಿಗೆ ಅನುಕೂಲ. ಧಾರ್ವಿುಕ ಚಿಂತನೆ. ಸರ್ಕಾರಿ ಅಧಿಕಾರಿಗಳಿಂದ ಧನ ನಷ್ಟ. ಯತ್ನ ಕಾರ್ಯಜಯ. ಶುಭಸಂಖ್ಯೆ: 3

ಮಕರ: ಧನ ಮತ್ತು ಉದ್ಯೋಗ ನಷ್ಟ. ಕುಟುಂಬದಲ್ಲಿ ವಾಗ್ವಾದಗಳು. ಪತ್ರ ವ್ಯವಹಾರಗಳಿಗೆ ಅನುಕೂಲಕರ ವಾತಾವರಣ. ಶುಭಸಂಖ್ಯೆ: 8

ಕುಂಭ: ಆಸೆ ಮತ್ತು ಭಾವನೆಗಳು ಈಡೇರುವುದು. ಬಂಧುಗಳಿಂದ ನಷ್ಟ. ಪುಣ್ಯಕರ್ಮ ಫಲಪ್ರಾಪ್ತಿ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 6

ಮೀನ: ಬಂಧುಗಳಿಂದ ಮೋಸ ಸಾಧ್ಯತೆ. ರಾಜಕೀಯ ವ್ಯಕ್ತಿಗಳ ಭೇಟಿ. ಆಸ್ತಿಯಿಂದ ಲಾಭ. ಆತ್ಮೀಯರ ಸಮಾಗಮದಿಂದ ಸಂತಸ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net