ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಹಿತಶತ್ರುಗಳಿಂದ ತೊಂದರೆ

Nitya-Bhavishya-vvani-1-2-1-1
Published on

ಮೇಷ: ಮನೆಗೆ ವಿಶೇಷ ಅತಿಥಿಗಳ ಆಗಮನ. ಸಹೋದರಿಯರಿಂದ ವಿಶೇಷ ಸಲಹೆ. ಸಂಜೆಯ ಹೊತ್ತಿಗೆ ಎಲ್ಲವೂ ಒಳಿತಾಗಲಿದೆ. ಶುಭಸಂಖ್ಯೆ: 7

ವೃಷಭ: ಹಿತಶತ್ರುಗಳಿಂದ ತೊಂದರೆ. ನಂಬಿದವರಿಂದಲೇ ಮೋಸವಾಗುವ ಸಾಧ್ಯತೆ. ಮಾತಿನ ಬಗ್ಗೆ ನಿಗಾ ಇರದಿದ್ದಲ್ಲಿ ಸಂಕಷ್ಟ. ಶುಭಸಂಖ್ಯೆ: 6

ಮಿಥುನ: ಮಕ್ಕಳಿಂದ ಸಮಸ್ಯೆ ಬರಬಹುದು. ಸಾವಧಾನದಿಂದ ಬಗೆಹರಿಸಿ. ಅನವಶ್ಯಕ ವಾಗ್ವಾದಕ್ಕೆ ಆಸ್ಪದ ಕೊಡದಿರಿ. ಶುಭಸಂಖ್ಯೆ: 8

ಕಟಕ: ಆತ್ಮೀಯರೊಂದಿಗೆ ಸಂತಸದಿಂದ ಕಾಲ ಕಳೆಯುವಿರಿ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ. ದಿನಾಂತ್ಯಕ್ಕೆ ಆಯಾಸ. ಶುಭಸಂಖ್ಯೆ: 4

ಸಿಂಹ: ನೂತನ ವಾಹನ ಖರೀದಿಯ ಬಗ್ಗೆ ಸಮಾಲೋಚನೆ. ಆತ್ಮೀಯರ ಸಮಾಗಮ. ದಿನಾಂತ್ಯಕ್ಕೆ ಆಪ್ತರ ಜತೆ ವಿಹಾರ. ಶುಭಸಂಖ್ಯೆ: 3

ಕನ್ಯಾ: ಸಹೋದರರೊಂದಿಗೆ ಘರ್ಷಣೆ. ಆಸ್ತಿ ವಿಚಾರದಲ್ಲಿ ತಾಳ್ಮೆಯಿಂದಿರಿ. ವಿನಾಕಾರಣ ವಿವಾದ ಎಳೆದುಕೊಳ್ಳಬೇಡಿ. ಶುಭಸಂಖ್ಯೆ: 4

ತುಲಾ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಲಾವಿದರಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಕುಟುಂಬದೊಂದಿಗೆ ಸಂತೋಷಕೂಟ. ಶುಭಸಂಖ್ಯೆ: 2

ವೃಶ್ಚಿಕ: ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ. ಹಿರಿಯರ ಆಶೀರ್ವಾದ. ದಿನಾಂತ್ಯಕ್ಕೆ ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 7

ಧನಸ್ಸು: ರಾಶ್ಯಾಧಿಪತಿಯ ನೀಚತ್ವದಿಂದ ಕೆಲಸದಲ್ಲಿ ಅಭಿವೃದ್ಧಿ ಇಲ್ಲ. ಹಿತೈಷಿಗಳ ಸಲಹೆ ಪಡೆದುಕೊಳ್ಳಿ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 6

ಮಕರ: ಮಾನಸಿಕ ಅಶಾಂತಿ. ವೈದ್ಯರ ಸಲಹೆಯನ್ನು ಪಾಲಿಸಿ. ಆರೋಗ್ಯ ಹದಗೆಡಬಹುದು.ಹುಷಾರು. ಕೃಷಿಕರಿಗೆ ವಿಶೇಷ ದಿನ. ಶುಭಸಂಖ್ಯೆ: 3

ಕುಂಭ: ಕುಟುಂಬದವರ ಬಗ್ಗೆ ಮೃದುಧೋರಣೆ ತಾಳಿ. ಹಿತಶತ್ರುಗಳ ಬಗ್ಗೆ ಅನುಕಂಪ ಬೇಡ. ನಿಮ್ಮ ಎಚ್ಚರದಲ್ಲಿ ನೀವಿರಿ. ಶುಭಸಂಖ್ಯೆ: 7

ಮೀನ: ಅನಿರೀಕ್ಷಿತ ಧನಲಾಭ. ನಿಮ್ಮ ವ್ಯಕ್ತಿತ್ವದ ಕುರಿತು ಸ್ನೇಹಿತರಿಂದ ಪ್ರಶಂಸೆ. ದಿನಾಂತ್ಯದಲ್ಲಿ ವಿಪರೀತ ಆಯಾಸ ಸಾಧ್ಯತೆ. ಶುಭಸಂಖ್ಯೆ: 8

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net