ದಿನ ಭವಿಷ್ಯ: ಈ ರಾಶಿಯವರು ಇಂದು ಮನೆಯಲ್ಲಿ ಕೆಲಸ ಮಾಡುವಾಗ ಎಚ್ಚರ ವಹಿಸಿ

Nitya-Bhavisya-FILEminimizer
Published on

ಮೇಷ: ಇಂದು ನೀವು ದಣಿಯುತ್ತೀರಿ ಮತ್ತು ಸಣ್ಣ ವಿಷಯಗಳಿಗೆ ಅಸಮಾಧಾನ ಹೊಂದುವ ಸಾಧ್ಯತೆ ಬಹಳವಾಗಿರುತ್ತದೆ. ಶುಭಸಂಖ್ಯೆ: 9

ವೃಷಭ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ದೀರ್ಘಕಾಲ ಬಾಕಿ ಕೊನೆಗೂ ದೊರಕುತ್ತದೆ. ಶುಭಸಂಖ್ಯೆ:5

ಮಿಥುನ: ಆಹಾರ ನಿಯಂತ್ರಣದಲ್ಲಿರಲಿ. ಆರ್ಥಿಕ ಸ್ಥಿತಿ ಸುಧಾರಿಸಿದರೂ ಅಧಿಕ ಖರ್ಚಿನಿಂದಾಗಿ ಯೋಜನೆಗಳ ಸಾಕಾರಕ್ಕೆ ಅಡ್ಡಿ . ಶುಭಸಂಖ್ಯೆ:3

ಕಟಕ: ನಿಮ್ಮನ್ನು ನೀವೇ ನೋಡಿಕೊಳ್ಳುವ ಬಯಕೆಗೆ ಇತರರ ಅಗತ್ಯಗಳು ಕಡಿವಾಣ ಹಾಕುತ್ತವೆ. ಭಾವನೆಗಳನ್ನು ತಡೆಹಿಡಿಯಬೇಡಿ. ಶುಭಸಂಖ್ಯೆ: 7

ಸಿಂಹ: ಮನೆಯಲ್ಲಿ ಕೆಲಸ ಮಾಡುವಾಗ ಎಚ್ಚರ ವಹಿಸಿ. ಹಣಕಾಸಿನಲ್ಲಿ ಸುಧಾರಣೆ. ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ:1

ಕನ್ಯಾ: ಇಂದು ನೀವು ಆರಾಮವಾಗಿರಬೇಕು ಹಾಗೂ ಕುಟುಂಬದ ಎಲ್ಲ ಸದಸ್ಯರನ್ನು ಸಂತೋಷವಾಗಿರಿಸಲು ಯತ್ನಿಸಬೇಕು. ಶುಭಸಂಖ್ಯೆ: 7

ತುಲಾ: ಕುಟುಂಬದೊಂದಿಗೆ ಸಂತೋಷ ಮತ್ತು ಆನಂದವನ್ನು ಹಂಚಿಕೊಳ್ಳಿ. ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ. ಶಾಂತಿಗೆ ಭಂಗ. ಶುಭಸಂಖ್ಯೆ:7

ವೃಶ್ಚಿಕ: ನಗು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ, ನಕ್ಕುಬಿಡಿ. ಯಾವುದೇ ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂರ್ಪಸಿ. ಶುಭಸಂಖ್ಯೆ: 2

ಧನಸ್ಸು: ಹಿಂದಿನ ಕೆಟ್ಟ ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತವೆ. ಇತರರಿಂದ ಸಹಾಯ ಪಡೆಯಿರಿ. ಶುಭಸಂಖ್ಯೆ:5

ಮಕರ: ಎಚ್ಚರಿಕೆಯಿಂದ ವಾಹನ ಚಲಾಯಿಸಿ. ನೀವು ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಮನಸ್ಥಿತಿಯಲ್ಲಿರುತ್ತೀರಿ. ಶುಭಸಂಖ್ಯೆ: 3

ಕುಂಭ: ಆರೋಗ್ಯಕ್ಕೆ ಆದ್ಯತೆ ನೀಡಿ. ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ, ಆದರೆ ಅಧ್ಯಯನ ಮಾಡಿ. ಶುಭಸಂಖ್ಯೆ: 4

ಮೀನ: ಅನಾರೋಗ್ಯದ ಬಗ್ಗೆ ರ್ಚಚಿಸುವುದನ್ನು ತಪ್ಪಿಸಿ. ಮಹಿಳಾ ಉದ್ಯೋಗಸ್ಥರಿಗೆ ಅಧಿಕಾರ ಪ್ರಾಪ್ತಿ. ಮಕ್ಕಳ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net