

ಮೇಷ: ಶಸ್ತ್ರ ವೈದ್ಯರಿಗೆ ಶುಭದಾಯಕವಾದ ದಿನ. ಅವಕಾಶಗಳನ್ನು ಒಪ್ಪಿಕೊಳ್ಳುವುದು ಸೂಕ್ತ. ಹಣಕಾಸಿನ ಕೊರತೆ ಇರುವುದಿಲ್ಲ. ಶುಭಸಂಖ್ಯೆ: 4
ವೃಷಭ: ರಾಜಕೀಯ ವರ್ಗದವರಿಗೆ ಉತ್ತಮ ದಿನ. ಕೃಷಿಕರಿಗೆ ಶುಭಸುದ್ದಿ ಸಿಗಲಿದೆ. ದಿನಸಿ ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ ಬರುವುದು. ಶುಭಸಂಖ್ಯೆ: 7
ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಬಹುದು. ಬಂಧುಗಳಿಂದ ಸಹಾಯ ಪಡೆಯುವುದು ಉತ್ತಮ. ಭಾವನೆಗಳಿಗೆ ಪೆಟ್ಟು ಬಿದ್ದೀತು. ಶುಭಸಂಖ್ಯೆ: 6
ಕಟಕ: ನೌಕರರಿಗೆ ವರ್ಗಾವಣೆ. ಹಣ್ಣು ತರಕಾರಿ ವ್ಯಾಪಾರಸ್ಥರಿಗೆ ನಿರೀಕ್ಷೆಗೆ ತಕ್ಕಂತೆ ಲಾಭ. ಆರ್ಥಿಕ ಸಂಕಷ್ಟ ಎದುರಿಸಬೇಕಾಗುವುದು. ಶುಭಸಂಖ್ಯೆ: 8
ಸಿಂಹ: ಕ್ರೀಡಾಪಟುಗಳಿಗೆ ಒಳ್ಳೆಯ ದಿನವಲ್ಲ. ಇಷ್ಟದೇವರನ್ನು ಭಕ್ತಿಯಿಂದ ಸ್ಮರಣೆ ಮಾಡಿ. ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ ಬರಲಿದೆ. ಶುಭಸಂಖ್ಯೆ: 3
ಕನ್ಯಾ: ಬಂಧುಗಳ ಸಹಕಾರ. ಹೂಡಿಕೆಯಲ್ಲಿ ಲೆಕ್ಕ ಹಾಕಿದ್ದಕ್ಕಿಂತ ಹೆಚ್ಚು ಲಾಭ ದೊರೆತು ಸಂತಸ. ಭವಿಷ್ಯದ ಚಿಂತೆಗಳು ಕಾಡಿಯಾವು. ಶುಭಸಂಖ್ಯೆ:1
ತುಲಾ: ಕೆಲಸದಲ್ಲಿ ಬಡ್ತಿ ದೊರೆತು, ಜವಾಬ್ದಾರಿ ಹೆಚ್ಚಲಿದೆ. ಮಾತೃ ವರ್ಗದವರಿಂದ ಸಹಾಯ ಸಿಗುವುದು. ಆಕಸ್ಮಿಕ ಧನಲಾಭವಾಗಲಿದೆ. ಶುಭಸಂಖ್ಯೆ: 2
ವೃಶ್ಚಿಕ: ಅನಗತ್ಯವಾಗಿ ಹಣವನ್ನು ವ್ಯಯಿಸಬೇಕಾಗುವುದು. ಮನಸ್ಸಿನಲ್ಲಿ ಅಸ್ವಸ್ಥತೆ ತೊಂದರೆ ಕೊಡಲಿದೆ. ಅನಗತ್ಯ ವಾಗ್ವಾದ ಒಳ್ಳೆಯದಲ್ಲ. ಶುಭಸಂಖ್ಯೆ: 2
ಧನುಸ್ಸು: ಸ್ಥಿರವಾದ ಮನಸ್ಸು. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಬುದ್ಧಿವಂತಿಕೆಯಿಂದ ವ್ಯವಹರಿಸಿದರೆ ಯಶಸ್ಸು. ಶುಭಸಂಖ್ಯೆ: 7
ಮಕರ: ಮಂಡಿ ನೋವಿನ ಸಮಸ್ಯೆ ಆಗಬಹುದು. ಅಧಿಕ ಕೆಲಸದೊತ್ತಡ. ಮಾನಸಿಕ ನೆಮ್ಮದಿಗೆ ಧ್ಯಾನ ಮಾಡಿ. ವ್ಯಾಪಾರಿಗಳಿಗೆ ಚಿಂತೆ. ಶುಭಸಂಖ್ಯೆ: 4
ಕುಂಭ: ತಂದೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಪತ್ನಿಯೊಂದಿಗೆ ವಾಗ್ವಾದ. ದುಡುಕಿನ ನಿರ್ಧಾರದಿಂದ ಹಾನಿ. ಶುಭಸಂಖ್ಯೆ:1
ಮೀನ: ಆರೋಗ್ಯದಲ್ಲಿ ತೊಂದರೆ, ವೈದ್ಯರ ಸಲಹೆ ಪಡೆಯಿರಿ. ಮನಸ್ಸಿನಲ್ಲಿ ಹೆದರಿಕೆ. ಮಾತಿನಲ್ಲಿ ನಿಯಂತ್ರಣ ಇದ್ದರೆ ಕ್ಷೇಮ. ಶುಭಸಂಖ್ಯೆ: 9