ಭವಿಷ್ಯ: ಈ ರಾಶಿಯವರಿಂದು ಬಹುಕಾಲದ ನಂತರ ಹಳೇ ಸ್ನೇಹಿತರನ್ನು ಭೇಟಿ ಮಾಡುವಿರಿ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ

Nithya Bhavishya
Published on

ಮೇಷ: ಗುರು ಹಿರಿಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವಿರಿ. ಶತ್ರು ಬಾಧೆ. ವಾದ-ವಿವಾದಗಳಲ್ಲಿ ಜಯ ನಿಮ್ಮ ಪಾಲಿಗಿದೆ. ಶುಭಸಂಖ್ಯೆ: 9

ವೃಷಭ: ಸ್ತ್ರೀಯರಿಗೆ ಆಭರಣ ಲಾಭ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕಾರ್ಯಸಾಧನೆಗಾಗಿ ತಿರುಗಾಟ ಮಾಡಬೇಕಾಗುವುದು. ಶುಭಸಂಖ್ಯೆ: 1

ಮಿಥುನ: ವ್ಯವಹಾರದಲ್ಲಿ ಎಚ್ಚರದಿಂದಿರಿ. ಉತ್ತಮ ಮಾರ್ಗ ದರ್ಶನ ಪಡೆದು ಮುಂದುವರಿಯಿರಿ. ದಾಂಪತ್ಯದಲ್ಲಿ ನೆಮ್ಮದಿಯ ಕ್ಷಣಗಳು. ಶುಭಸಂಖ್ಯೆ: 6.

ಕಟಕ: ಇಷ್ಟಾರ್ಥ ಸಿದ್ಧಿಯಾಗಿ ಸಮಾಧಾನ. ಮಾತಾಪಿತರಲ್ಲಿ ಪ್ರೀತಿಯಿಂದ ವ್ಯವಹರಿಸಿ. ನಂಬಿದ ಜನರಿಂದ ಮೋಸವಾದೀತು, ಎಚ್ಚರ. ಶುಭಸಂಖ್ಯೆ: 3

ಸಿಂಹ: ವಿವಾಹಯೋಗ. ಬಹುಕಾಲದ ನಂತರ ಹಳೇ ಸ್ನೇಹಿತರನ್ನು ಭೇಟಿ ಮಾಡುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ: 8

ಕನ್ಯಾ: ಅಲ್ಪ ಕಾರ್ಯಸಿದ್ಧಿ. ಆರೋಗ್ಯದ ಕಡೆ ಗಮನ ಹರಿಸಿ. ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ. ಕೃಷಿಕರಿಗೆ ನಷ್ಟ. ಶುಭಸಂಖ್ಯೆ: 4

ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಮನೋವ್ಯಥೆ ದೂರಮಾಡಲು ಧ್ಯಾನ, ಸಹಕಾರಿ ಯಾದೀತು. ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 8

ವೃಶ್ಚಿಕ: ವಿಪರೀತ ಖರ್ಚು ಅಗಬಹುದು, ನಿಯಂತ್ರಿಸಲು ಯತ್ನಿಸಿ. ಕೆಲಸ ಕಾರ್ಯಗಳಲ್ಲಿ ವಿಘ್ನ. ವೈದ್ಯರಿಗೆ ಉತ್ತಮ ಆದಾಯವಿದೆ. ಶುಭಸಂಖ್ಯೆ: 1

ಧನುಸ್ಸು: ಶತ್ರುಬಾಧೆ. ವ್ಯಾಪಾರದಲ್ಲಿ ಲಾಭ. ಆಪ್ತರೊಡನೆ ಕಲಹ ಉಂಟಾಗುವ ಸಾಧ್ಯತೆ. ಉದ್ಯೋಗಸ್ಥ ಮಹಿಳೆಯರಿಗೆ ಮುಂಬಡ್ತಿ. ಶುಭಸಂಖ್ಯೆ: 9

ಮಕರ: ಧನಲಾಭ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ದುಷ್ಟರಿಂದ ದೂರವಿರಿ. ಇಷ್ಟ ದೇವರ ಸ್ಮರಣೆಯಿಂದ ಸಮಾಧಾನ. ಶುಭಸಂಖ್ಯೆ: 3

ಕುಂಭ: ಇತರರ ಬಣ್ಣದ ಮಾತಿಗೆ ಮರುಳಾಗಬೇಡಿ. ಚಂಚಲ ಮನಸ್ಸು ಅನಾಹುತ ಮಾಡೀತು, ನಿಯಂತ್ರಿಸಿ. ಯತ್ನ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 6

ಮೀನ: ಆರೋಗ್ಯದ ಕಡೆ ಗಮನ ಕೊಡಲೇಬೇಕಾದ ಸಮಯ. ದ್ರವ್ಯಲಾಭವಾಗಲಿದೆ. ಉದ್ಯೋಗದಲ್ಲಿ ತೊಂದರೆ. ಕೋಪಿಸಿಕೊಳ್ಳಬೇಡಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net