ವಿಜಯವಾಣಿ, ದಿಗ್ವಿಜಯ ನ್ಯೂಸ್‌ನಿಂದ ಫೆ.19ರಂದು 'ಸಂಗೀತ ಸಂಜೆ'; ಇಂದೇ ಹೆಸರು ನೋಂದಾಯಿಸಿಕೊಳ್ಳಿ

Sangeetha Sanje
Published on

ಬೆಂಗಳೂರು: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್​ ಸಹಭಾಗಿತ್ವದಲ್ಲಿ ಫೆ.19 ರಂದು ಸಂಜೆ 5 ಗಂಟೆಯಿಂದ ಕಬ್ಬನ್​ ಪಾರ್ಕ್​ ಎದುರಿಗಿರುವ ಎಂ.ಎಸ್​. ಬಿಲ್ಡಿಂಗ್​ನ ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಿಗಳ ಸಂಘದ ಸಭಾಂಗಣದಲ್ಲಿ 'ಸಂಗೀತ ಸಂಜೆ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

ಹೆಸರಾಂತ ಸಂಗೀತಗಾರರು 'ಸಂಗೀತ ಸಂಜೆ' ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಖ್ಯಾತ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್, ಅಂಕುಶ್ ನಾಯಕ್ ಪಾಲ್ಗೊಳ್ಳಲಿದ್ದಾರೆ. ಅಂತೆಯೇ ಕಲಾವಿದರಾದ ರಾಜೇಂದ್ರ ನಾಯಕ್ ಹಾಗೂ ಕೇಶವ್ ಜೋಶಿ (ತಬಲ), ಪದ್ಮಶ್ರೀ ವೆಂಕಟೇಶ್ ಕುಮಾರ್ (ಹಾಡುಗಾರಿಕೆ), ನರೇಂದ್ರ ಎಲ್ ನಾಯಕ್ (ಹಾರ್ಮೋನಿಯಂ) ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ. ಸಂಗೀತ ಮಾಂತ್ರಿಕರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಿಮಗೆ ಆತ್ಮೀಯವಾಗಿ ಆಹ್ವಾನವನ್ನು ನೀಡುತ್ತಿದ್ದೇವೆ. 

ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಶಿವಮೂರ್ತಿ -8884432389, ಸದಾಶಿವ್ -6363933258, ಅಖಿಲೇಶ್ -9986172645 ಸಂಪರ್ಕಿಸಬಹುದು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಲಿಂಕ್​ ಮೇಲೆ ಕ್ಲಿಕ್ಕಿಸಿ ಈಗಲೇ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net