

ಶಿವೋ ಮಹೇಶ್ವರಶ್ಚೆ ೖವ ರುದ್ರಃ ಶಂಭುರುಮಾಪತಿಃ | ಸಂಸಾರವೈದ್ಯಃ ಸರ್ವಜ್ಞಃ ಪರಮಾತ್ಮೇತಿ ಚಾಷ್ಟಕಂ ||
ಶಿವ, ಮಹೇಶ್ವರ, ರುದ್ರ, ಶಂಭು, ಉಮಾಪತಿ, ಸಂಸಾರವೈದ್ಯ, ಸರ್ವಜ್ಞ, ಪರಮಾತ್ಮ ಇವು ಶಿವನ ಎಂಟು ಸುಪ್ರಸಿದ್ಧ ನಾಮಗಳು. ಮಂಗಲಕರನಾಗಿರುವದರಿಂದ ಶಿವ, ಸರ್ವರಿಗೂ ಮತ್ತು ಸರ್ವದಕ್ಕೂ ಈಶ್ವರನಾಗಿರುವುದರಿಂದ ಮಹೇಶ್ವರ, ಶರಣಾಗತರ ದುಃಖವನ್ನು ದೂರ ಮಾಡುವುದರಿಂದ ರುದ್ರ, ಶುಭವನ್ನುಂಟುಮಾಡುವುದರಿಂದ ಶಂಭು, ಉಮೆಯ ಪತಿಯಾಗಿರುವುದರಿಂದ ಉಮಾಪತಿ, ಸಂಸಾರವೆಂಬ ರೋಗವನ್ನು ಪರಿಹರಿಸುವುದರಿಂದ ಸಂಸಾರವೈದ್ಯ, ತ್ರಿಕಾಲ ಜ್ಞಾನಿಯಾದ ಕಾರಣ ಸರ್ವಜ್ಞ ಮತ್ತು ಸರ್ವರಿಗೂ ಪರಮ ಆಪ್ತನಾಗಿರುವುದರಿಂದ ಪರಮಾತ್ಮ ಎಂಬ ನಾಮಗಳು ಶಿವನಿಗೆ ಅನ್ವರ್ಥಕವಾಗಿವೆ.
| ಚಂದ್ರಜ್ಞಾನಾಗಮ (11.19) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು