ಶ್ರೀ ಶೈವಾಗಮ; ಅಮೃತ ಬಿಂದು

Sudina-7-Amrutabindu
Published on

ಶಂಭುಪಾದಾಬ್ಜಯೋರ್ನಿತ್ಯಂ ಪ್ರಣಾಮೋ ಮಾನಸೋ ಹಿ ಯತ್ | ಶೀಲಮೇತತ್ ಕಿಲ ಚತುಃಪಂಚಾಶಂ ಸಂಪ್ರಕೀರ್ತಿತಮ್ || ಮನಸ್ಸಿನ ಮೂಲಕ ಶಿವನ ಪಾದಕಮಲಗಳಿಗೆ ಸದಾ ನಮಸ್ಕರಿಸುವುದು ಐವತ್ನಾಲ್ಕನೆಯ ಶೀಲ. ಬಹಿರಂಗದಲ್ಲಿ ಮಾಡುವ ನಮಸ್ಕಾರಕ್ಕಿಂತ ಮನದಲ್ಲಿ ತನಗೆ ಇಷ್ಟವಾದ ಶಿವನ ಮೂರ್ತಿಯನ್ನು ಕಲ್ಪಿಸಿಕೊಂಡು ಅದನ್ನು ಭಾನಾತ್ಮಕವಾಗಿ ನಮಸ್ಕರಿಸುವ ರೂಪದ ಅಂತರಂಗದ ನಮಸ್ಕಾರವು ಸವೋತ್ಕ ೃ್ಟವಾದುದು. ನಮಸ್ಕಾರವು ನಮ್ಮೊಳಗಿನ ಅಹಂಭಾವವನ್ನು ನಾಶಪಡಿಸಿ ನಮ್ರತೆಯನ್ನು ಜಾಗೃತಗೊಳಿಸುತ್ತದೆ. ಎಲ್ಲರೂ ತನಗೇ ನಮಸ್ಕರಿಸಬೇಕು ಎಂದು ದುರಹಂಕಾರಿ ವ್ಯಕ್ತಿ ಬಯಸುತ್ತಾನೆಯೇ ಹೊರತು ತಾನು ಯಾರಿಗೂ ನಮಸ್ಕರಿಸುವ ವಿಚಾರ ಕೂಡ ಮಾಡುವುದಿಲ್ಲ.

| ಚಂದ್ರಜ್ಞಾನಾಗಮ (9.112) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net