ಆಲ್ಬನಿಯಲ್ಲೂ 'ವಿಜಯಾನಂದ' ಸಿನಿಮಾ ಹವಾ: ಕುಟುಂಬಸ್ಥರೊಂದಿಗೆ ಚಿತ್ರ ವೀಕ್ಷಿಸಲು ಬೆಂಕಿ ಬಸಣ್ಣ ಕರೆ

Vijayananda
Published on

ನ್ಯೂಯಾರ್ಕ್​: ವಿಆರ್​​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಸಿನಿಮಾ ‘ವಿಜಯಾನಂದ’ ಡಿ.9ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್​ ಸಿಕ್ಕಿದೆ.

ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಯುಳ್ಳ ‘ವಿಜಯಾನಂದ’ ಚಿತ್ರವನ್ನ ಮೊದಲ ದಿನವೇ ಕಣ್ತುಂಬಿಕೊಳ್ಳಲು ಅಮೆರಿಕದ ಆಲ್ಬನಿಯಲ್ಲಿ ಕನ್ನಡಿಗರಾದಿಯಾಗಿ ಡಾ. ವಿಜಯ ಸಂಕೇಶ್ಚರ ಅವರ ಅಭಿಮಾನಿಗಳು ಮುಗಿಬಿದ್ದ ದೃಶ್ಯ ಕಂಡು ಬಂತು. ವಿದೇಶದಲ್ಲೂ ವಿಜಯಾನಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನಿಮಾ ನೋಡಲು ಕುಟುಂಬಸ್ಥರ ಜತೆ ಆಗಮಿಸುತ್ತಿದ್ದಾರೆ.

'ಆಲ್ಬನಿಯಲ್ಲಿ ಬಿಡುಗಡೆಯಾದ ಮೊದಲ ದಿನವೇ "ವಿಜಯಾನಂದ" ಸಿನಿಮಾವನ್ನು ಅನಿವಾಸಿ ಕನ್ನಡಿಗರೊಂದಿಗೆ ನಾನೂ ನೋಡಿದೆ. ಬಹುಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ. ಬದುಕಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಕನಸು ಕಾಣುತ್ತಿರುವ ಹಾಗೂ ನನ್ನಿಂದ ಏನೂ ಸಾಧ್ಯವಿಲ್ಲ, ಬದುಕು ಇಷ್ಟೇ ಎಂದು ಜಿಗುಪ್ಸೆ ಪ್ರತಿಯೊಬ್ಬರರೂ ಈ ಸಿನಿಮಾವನ್ನ ನೋಡಬೇಕು. ಸ್ಫೂರ್ತಿಯ ಚಿಲುಮೆಯಾಗಲಿದೆ ಈ ಸಿನಿಮಾ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಈ ಸಿನಿಮಾವನ್ನು ತೋರಿಸಬೇಕು. ಸಾಧನೆಗೆ ಪ್ರೇರಣೆ ಡಾ.ವಿಜಯ ಸಂಕೇಶ್ವರ ಅವರು' ಎಂದು ನಾವಿಕ ಸಂಸ್ಥೆಯ ಕಾರ್ಯದರ್ಶಿ ಬೆಂಕಿ ಬಸಣ್ಣ ಸಂತಸ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net