ಚಿತ್ರ ನಿರ್ದೇಶಕನೊಂದಿಗೆ ಮಗಳು ಪರಾರಿಯಾದ ಹಿನ್ನೆಲೆಯಲ್ಲಿ ಬೇಸತ್ತು ವಿಷ ಸೇವಿಸಿದ್ದ ತಾಯಿ ಸಾವು

Death 1 Jan 2020
Published on

ಮಂಡ್ಯ : ಚಿತ್ರ ನಿರ್ದೇಶಕನೊಂದಿಗೆ ಮಗಳು ಪರಾರಿಯಾಗಿದ್ದ ಹಿನ್ನೆಲೆಯಲ್ಲಿ ಬೇಸತ್ತು ವಿಷ ಸೇವಿಸಿದ್ದ ತಾಯಿ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಟಿ ವಿಜಯಲಕ್ಷ್ಮಿ ಅವರ ತಾಯಿ ಸವಿತಾ ಮೃತಪಟ್ಟವರು. ಮಂಡ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸವಿತಾ ಅವರ ಮಗಳು ವಿಜಯಲಕ್ಷ್ಮಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದರು. ಅವರು ಚಿತ್ರ ನಿರ್ದೇಶಕ ಆಂಜಿನಪ್ಪ ಎಂಬುವವರನ್ನು ಪ್ರೀತಿಸುತ್ತಿದ್ದರು. ಜ.9ರಂದು ಇಬ್ಬರೂ ನಾಪತ್ತೆಯಾಗಿದ್ದರು. ಮಗಳು ನಿರ್ದೇಶಕ ಆಂಜಿನಪ್ಪ ಜತೆ ತೆರಳಿರುವ ವಿಚಾರ ತಿಳಿದು ತಾಯಿ ಸವಿತಾ ಹಾಗೂ ಅಜ್ಜಿ ಚನ್ನಮ್ಮ ವಿಷ ಸೇವಿಸಿದ್ದರು. ಕೂಡಲೇ ಇಬ್ಬರನ್ನು ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಡಿ.9ರಂದು ಚನ್ನಮ್ಮ ಮೃತಪಟ್ಟಿದ್ದರು. ಮಂಗಳವಾರ ತಾಯಿ ಸವಿತಾ ಮೃತಪಟ್ಟಿದ್ದಾರೆ.

ತಾಯಿ ಸವಿತಾ ಮೃತಪಟ್ಟಿದ್ದರೂ ಮಗಳು ವಿಜಯಲಕ್ಷ್ಮಿ ಅಂತ್ಯ ಸಂಸ್ಕಾರಕ್ಕೆ ಬರದೆ ದೂರ ಉಳಿದಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net