ವಿಜಯ್ ದೇವರಕೊಂಡ​-ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ನಿಜ ಅನ್ನೋದಕ್ಕೆ ಈ ಫೋಟೋ ಸಾಕ್ಷಿ! ​ | Vijay-Rashmika

ವಿಜಯವಾಣಿ (35)
Published on

Vijay-Rashmika: ಅ.03ರಂದು ಸದ್ದಿಲ್ಲದೇ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ದಕ್ಷಿಣ ಭಾರತದ ಸ್ಟಾರ್​ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ, ಈ ಮೂಲಕ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಹಾಗೂ ಸಿಹಿ ಸುದ್ದಿ ಎರಡನ್ನೂ ನೀಡಿದರು.

ಕೇವಲ ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದ ಖಾಸಗಿ ಸಮಾರಂಭದಲ್ಲಿ ರಶ್ಮಿಕಾ-ವಿಜಯ್ ನಿಶ್ಚಿತಾರ್ಥ ಮಾಡಿಕೊಂಡರು. ವರದಿಗಳ ಪ್ರಕಾರ, ಈ ಜೋಡಿಯ ಮದುವೆ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯುವ ನಿರೀಕ್ಷೆಯಿದೆ. ಆದಾಗ್ಯೂ, ಎಂಗೇಜ್​ಮೆಂಟ್​ ಕುರಿತಂತೆ ಇಬ್ಬರೂ ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ನಿಶ್ಚಿತಾರ್ಥದ ಫೋಟೋ ಅಥವಾ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಇಲ್ಲೊಂದು ಫೋಟೋ ಎಂಗೇಜ್​ಮೆಂಟ್​ ಆಗಿರುವುದು ಖಚಿತ ಎಂಬುದನ್ನು ದೃಢಪಡಿಸಿದೆ.

ಇತ್ತೀಗಷ್ಟೇ ವಿಜಯ್ ದೇವರಕೊಂಡ ಮತ್ತು ಅವರ ಸಹೋದರ ಆನಂದ್ ದೇವರಕೊಂಡ ಆಂಧ್ರಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿರುವ ದೃಶ್ಯವೊಂದು ಜಾಲತಾಣದಲ್ಲಿ ಹರಿದಾಡಿದೆ. ಈ ಸಂದರ್ಭದಲ್ಲಿ, ವಿಜಯ್​ ಅಭಿಮಾನಿಗಳು ನೀಡಿದ ಹೂಗುಚ್ಚವನ್ನು ಸ್ವೀಕರಿಸುತ್ತಿರುವ ಫೋಟೋ ಸಖತ್ ಸದ್ದು ಮಾಡಿದೆ. ಕಾರಣ, ಆ ಫೋಟೋದಲ್ಲಿ ವಿಜಯ್​ ಕೈಬೆರಳಲ್ಲಿ ಉಂಗುರ ಇರುವುದು ಕಾಣಿಸಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಫ್ಯಾನ್ಸ್​, ಇದು ಪಕ್ಕಾ ನಿಶ್ಚಿತಾರ್ಥದ ಉಂಗುರವೇ ಎಂದು ನಿರ್ಧರಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net