

ಹೈದರಾಬಾದ್: ವಿಜಯ್ ದೇವರಕೊಂಡ ಸದ್ಯ ಟಾಲಿವುಡ್ನ ಟಾಪ್ ನಾಯಕರ ಸಾಲಿನಲ್ಲಿದ್ದಾರೆ. ಬಿಗ್ಬಜೆಟ್ ಸಿನಿಮಾಗಳಲ್ಲಿಯೂ ವಿಜಯ್ ತೊಡಗಿಸಿಕೊಳ್ಳುತ್ತಿದ್ದಾರೆ. ಇದೀಗ ಅವರ ಸಿನಿಮಾ ಬತ್ತಳಿಕೆಗೆ ಮತ್ತೊಂದು ಬಿಗ್ ಸಿನಿಮಾ ಸೇರ್ಪಡೆಗೊಂಡಿದೆ.
ಇದನ್ನೂ ಓದಿ: ಕಸ್ತೂರಿ ಮಹಲ್ನಲ್ಲಿ ಶಾನ್ವಿಗೆ ಹೊಸ ಅವತಾರ
ಟಾಲಿವುಡ್ನ ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದರಲ್ಲಿ ವಿಜಯ್ ನಾಯಕನಾಗಿ ನಟಿಸುವುದು ಅಧಿಕೃತವಾಗಿದ್ದು, ಸ್ವತಃ ನಟ ಮತ್ತು ನಿರ್ದೇಶಕ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿಯನ್ನು ಬಹಿರಂಗಗೊಳಿಸಿದ್ದಾರೆ.
ಸದ್ಯ ಈ ಕಾಂಬಿನೇಷನ್ ಒಂದಾಗಿದ್ದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಕೇದಾರ ಸೆಲಗಂಸೆಟ್ಟಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಹಾಗಾದರೆ ಯಾವಾಗ ಈ ಸಿನಿಮಾ ಸೆಟ್ಟೇರಲಿದೆ? ಸದ್ಯ ಅಲ್ಲು ಅರ್ಜುನ್ ಅವರೊಂದಿಗೆ ಪುಷ್ಪ ಚಿತ್ರದಲ್ಲಿ ಸುಕುಮಾರ್ ಬಿಜಿಯಾಗಿದ್ದಾರೆ. ಆ ಸಿನಿಮಾ ಮುಗಿದ ಬಳಿಕವಷ್ಟೇ ಅಂದರೆ 2022ರಲ್ಲಿ ಈ ಚಿತ್ರ ಸೆಟ್ಟೇರಲಿದೆ. (ಏಜೆನ್ಸೀಸ್)