

Vijay Devarakonda: ಸಾಲು ಸಾಲು ಸೋಲುಝಗಳನ್ನು ಎದುರಿಸುತ್ತಿದ್ದರೂ, ನಾಯಕ ವಿಜಯ್ ದೇವರಕೊಂಡ ಅವರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಸಿನಿಮಾಗಳು ಸೋತ ಬಳಿಕವೂ, ಅವರು ಪ್ರತಿ ಚಿತ್ರದಲ್ಲೂ ತಮ್ಮ ನಟನೆಯಿಂದ ಪ್ರಭಾವಿತರಾಗುತ್ತಲೇ ಇದ್ದಾರೆ. ಕಿಂಗ್‌ಡಮ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವ ವಿಜಯ್ ದೇವರಕೊಂಡ ಮತ್ತೆ ಫಾರ್ಮ್‌ಗೆ ಮರಳುವ ನಿರೀಕ್ಷೆಯಿದೆ.
ವಿಜಯ್ ದೇವರಕೊಂಡ ಮುಂದಿನ ಚಿತ್ರ ಕಿಂಗ್‌ಡಮ್ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸೂರ್ಯದೇವರ ನಾಗವಂಶಿ ನಿರ್ಮಿಸಿದ 'ಕಿಂಗ್‌ಡಮ್' ಇದೇ ಜುಲೈ 31 ರಂದು ಬಿಡುಗಡೆಯಾಗಲಿದೆ.
ಇನ್ನೂ ವಿಜಯ್ ದೇವರಕೊಂಡ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ನಮ್ಮ ಹೀರೋ ಹಾರ್ಡ್ ವರ್ಕ್ ಎಂದು ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಯೇ ಹರಿಸುತ್ತಿದ್ದಾರೆ. ವೀಡಿಯೊದಲ್ಲಿ, ವಿಜಯ್ ದೇವರಕೊಂಡ ಗೋಡೆಯ ಮೇಲೆ ಎರಡು ಕಾಲುಗಳನ್ನು ಬ್ಯಾಲೆನ್ಸ್ ಮಾಡಿ ಮಸ್ತ್ ಆಗಿ ಗೋಡೆ ಹತ್ತುವ ಸ್ಟಂಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಹ್ಯಾಟ್ಸ್ ಆಫ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.