ಅನಂತಪದ್ಮನಾಭ ಭಟ್‌ಗೆ ವಿದ್ಯಾವಿಭೂಷಣ ಪ್ರಶಸ್ತಿ

1kls1 (1)
ಕಳಸದ ಶ್ರೀ ಕಲಶೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅನಂತಪದ್ಮನಾಭ ಭಟ್ ಅವರಿಗೆ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕರ್ನಾಟಕ ವಿದ್ಯಾವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Published on

ಕಳಸ: ಕಲಶೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಎಚ್.ಎಸ್.ಅನಂತಪದ್ಮನಾಭ ಭಟ್ ಅವರು ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರುತಿಸಿ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕರ್ನಾಟಕ ವಿದ್ಯಾವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಭಾನುವಾರ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕರ್ನಾಟಕ ಸುವರ್ಣ ಸಂಭ್ರಮ-50 ಮತ್ತು ಕನ್ನಡಿಗರ ಸಾರ್ವಭೌಮತ್ವ ಕುರಿತು ವಿಚಾರ ಸಂಕಿರಣ, ರಾಷ್ಟ್ರೀಯ ಸುಪುತ್ರ, ರಾಷ್ಟ್ರೀಯ ಸುಪುತ್ರಿ ವಿಶೇಷ ಪ್ರಶಸ್ತಿ ಮತ್ತು ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಿಸಲಾಯಿತು.
ಅನಂತಪದ್ಮನಾಭ ಭಟ್ 1984ರಲ್ಲಿ ಶೃಂಗೇರಿ ಶ್ರೀಮಠದಲ್ಲಿ ವೇದಾಧ್ಯಯನ ಮಾಡಿ, ತಮಿಳುನಾಡಿನ ಶ್ರೀಪುರದ ಶ್ರೀ ಶಾರದಾಂಬೆ ದೇಗುಲದ ಅರ್ಚಕನಾಗಿ 7 ವರ್ಷ ಸೇವೆ ಸಲ್ಲಿಸಿದ್ದರು. ನಂತರ ತೀರ್ಥಹಳ್ಳಿ ಮಹಾಹೃಷಿ ವೇದ ವಿಜ್ಞಾನ ವಿದ್ಯಾಪೀಠದಲ್ಲಿ ಹಾಗೂ ತೀರ್ಥಮುತ್ತೂರಿನ ವಿದ್ಯಾಪೀಠ, ದಾವಣಗೆರೆಯ ಪುಣ್ಯ ಸ್ಥಳ ಎಂಬಲ್ಲಿ, ಉತ್ತರ ಕರ್ನಾಟಕದ ನೆಲಮಾವು ಮಠದಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರು. ಶ್ರೀರಂಗಪಟ್ಟಣದಲ್ಲಿ ಸರ್ವದ್ಭುತ ಶಾಂತಿ ಹೋಮವನ್ನು ಒಂದು ತಿಂಗಳ ಕಾಲ ಮಾಡಿದ್ದರು. ಇವರ ಈ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net