ಗುಣಮಟ್ಟ ಮತ್ತು ಕೌಶಲ್ಯ ಒಂದೇ: ಡಾ. ಎಸ್.ವಿದ್ಯಾಶಂಕರ್.... ಆರ್.ಆರ್.ಕಾಲೇಜಿನ ಬಿ.ಟೆಕ್ ತರಗತಿಗಳ ಉದ್ಘಾಟನೆ

Published on

ಬೆಂಗಳೂರು:

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಸಿಗಬೇಕಾದಲ್ಲಿ ಗುಣಮಟ್ಟ ಮತ್ತು ಕೌಶಲ್ಯ ಒಂದೇ ಮಾರ್ಗ ಎಂಬುದನ್ನು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಂಡು ವ್ಯಾಸಂಗ ಮಾಡಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕುಲಪತಿ ಡಾ.ಎಸ್.ವಿದ್ಯಾಶಂಕರ್ ಹೇಳಿದರು.

ಆರ್‌ಆರ್ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಆಯೋಜಿಸಿದ್ದ ಮೊದಲ ವರ್ಷದ ಬಿ.ಟೆಕ್ ತರಗತಿಗಳ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೆ ಒಳ್ಳೆಯ ಕಂಪನಿಗಳಲ್ಲಿ ಉದ್ಯೋಗ ಅವಕಾಶಗಳು ಸಿಗಬೇಕಾದಲ್ಲಿ ಪ್ರಭಾವ ಬಳಕೆ ಮಾಡುತ್ತಿದ್ದರು.ಇಂದು ಕಾಲ ಬದಲಾಗಿದೆ. ಎಲ್ಲಿ ಗುಣಮಟ್ಟತೆ ಮತ್ತು ಕೌಶಲ್ಯ ಇರಲಿದೆ ಅವರಿಗೆ ಮಾತ್ರವೇ ಉದ್ಯೋಗ ಸಿಗಲಿದೆ. ಇದನ್ನು

ಗಮನದಲ್ಲಿಟ್ಟುಕೊಂಡು ವ್ಯಾಸಂಗ ಮಾಡಬೇಕು ಎಂದರು.

ಇನ್ನು ವೈದ್ಯ ವಿದ್ಯಾರ್ಥಿಗಳು ಜೀವನ ಪೂರ್ತಿ ಕಲಿಯುತ್ತಲೇ ಇರುತ್ತಾರೆ. ಆದರೆ, ನಮ್ಮ ಎಂಜಿನಿಯರಿಂಗ್ ವಿದ್ಯಾರ್ಥಿಗಳು 4 ವರ್ಷ ಓದಿದ ಮೇಲೆ ಇಷ್ಟೇ ಎಂದು ಕಲಿಯುವ ಕಡೆ ನಿರಾಸಕ್ತಿ ಹೊಂದುತ್ತಾರೆ. ಆದರೆ, ಕಲಿಕೆ ಎಂಬುದು ನಿರಂತರ. ನಾವು ಎಂದಿಗೂ ಕಲಿಯುತ್ತಲೇ ಇರಬೇಕು. ವಿದ್ಯಾರ್ಥಿಗಳು ನವೋದ್ಯಮದ ಕಡೆ ಹೆಚ್ಚು ಒಲವು ತೋರಬೇಕು ಎಂದರು.

ಆರ್‌ಆರ್ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಪ್ರಾಂಶುಪಾಲರಾದ ಡಾ.ಕೆ.ವಿ.ಮಹೇಂದ್ರ ಮಾತನಾಡಿ,

ವಿಟಿಯು ಸಾಕಷ್ಟು ಸುಧಾರಣೆ ತಂದಿದ್ದು ಪರೀಕ್ಷೆ ಮುಗಿದ ಕೆಲವೇ ಕ್ಷಣದಲ್ಲಿ ಫಲಿತಾಂಶ ಸಿಗಲಿದೆ. ಅಲ್ಲದೆ, ಅದು ನೇರವಾಗಿ ವಿದ್ಯಾರ್ಥಿಗಳ ಮೊಬೈಲ್ ಗೆ ತಲುಪಲಿದೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ನಾವು ಹಲವು ಕೈಗಾರಿಕೆಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಇಂಟರ್ ಶ್ಿ ಹಾಗು ಉತ್ತಮ ಉದ್ಯೋಗಾವಕಾಶಗಳು ಸಿಗಲಿವೆ ಎಂದರು.

ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ವಾಯತ್ತತೆ ಪಡೆದ ಮೊದಲ ಬ್ಯಾಚ್ ಇದಾಗಿದೆ . ಈ ವೇಳೆ ಆರ್‌ಆರ್ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಅಧ್ಯಕ್ಷ ವೈ.ರಾಜಾರೆಡ್ಡಿ, ನಿರ್ದೇಶಕ ಎಚ್. ಅರುಣ್, ಕಾರ್ಯದರ್ಶಿ ಎಚ್.ಆರ್. ಕಿರಣ್, ಪ್ರಾಂಶುಪಾಲರಾದ ಡಾ.ಕೆ.ವಿ.ಮಹೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net