ಡ್ಯಾನ್ಸ್‌ ಮಾಡುವಾಗಲೇ ಕುಸಿದು ಬಿದ್ದ ನಟಿ Vidya Balan! ಮುಂದೇನಾಯ್ತು ನೋಡಿ

Vidya
Published on

ಮುಂಬೈ: ಕಳೆದ ರಾತ್ರಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೂಲ್ ಭುಲೈಯಾ 3 ಚಿತ್ರದ ಐಕಾನಿಕ್ ಸಾಂಗ್  (Ami Je Tomar 3.0) ಹಾಡಿಗೆ ವಿದ್ಯಾ ಬಾಲನ್​​ (Vidya Balan) ಮತ್ತು ಮಾಧುರಿ ದಿಕ್ಷಿತ್ (Madhuri Dixit) ಗ್ರೇಸ್​ಪುಲ್​ ಆಗಿ ಹೆಜ್ಜೆ ಹಾಕಿದ್ದಾರೆ.ಈ ಹಾಡಿಗೆ ಜೋಡಿಯಾಗಿ ಹೆಜ್ಜೆ ಹಾಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೂಲ್ ಭುಲೈಯಾ 3 ಚಿತ್ರದ   ಹಾಡಿ​ಗೆ ನೃತ್ಯ ಮಾಡುತ್ತಿರುವ ಸಂದರ್ಭದಲ್ಲಿ ನಟಿ ವಿದ್ಯಾ ಬಾಲನ್​ ಆಯ ತಪ್ಪಿಬಿದ್ದಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ವಿದ್ಯಾ ಬಾಲನ್​ ಅವರು  ಮಾಧುರಿ ದೀಕ್ಷಿತ್ ಜೊತೆ ಈ ಹಾಡಿಗೆ ನೃತ್ಯ ಮಾಡುತ್ತಿದ್ದರು. ಅದ್ಭುತ ನೃತ್ಯದ ಮೂಲಕ ಇಬ್ಬರೂ ತಾರೆಯರು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಆದರೆ ಏಕಾಏಕಿ ವಿದ್ಯಾ ಅವರು ಆಯ ತಪ್ಪಿ ಬಿದ್ದುಬಿಟ್ಟರು. ಆದರೆ ಅದೇ ವೇಳೆ ಸಮಯ ಪ್ರಜ್ಞೆ ಮೆರೆದ ನಟಿ, ಕೂಡಲೇ ಕುಳಿತಲ್ಲಿನಿಂದಲೇ ನೃತ್ಯಕ್ಕೆ ಸ್ಟೆಪ್​ ಹಾಕಿ, ಏನೂ ಆಗಿಲ್ಲ ಎನ್ನುವಂತೆ ಎದ್ದುನಿಂತು ನೃತ್ಯ ಮುಂದುವರೆಸಿ ಜನರ ಮನಸ್ಸನ್ನು ಗೆದ್ದುಬಿಟ್ಟರು. ಇವರು ಬಿದ್ದರೂ ಮಾಧುರಿ ದೀಕ್ಷಿತ್​ ವಿಚಲಿತಗೊಳ್ಳದೇ ತಮ್ಮ ನೃತ್ಯವನ್ನು ಮುಂದುವರೆಸಿದ್ದರು.

ಮಾಧುರಿ ದೀಕ್ಷಿತ್ (Madhuri Dixit) ನೃತ್ಯ ನೆಟ್ಟುಗರ ಮನಗೆದ್ದಿದಂತು ಸುಳ್ಳಲ್ಲ. ಹಸಿರು ಮತ್ತು ಕಪ್ಪು ಬಣ್ಣದ ಬಟ್ಟೆಯಲ್ಲಿ ಸುಂದರವಾಗಿ ಕಾಣುತ್ತಿರುವ ಈ ನಟಿಯರ ಕೆಮಿಸ್ಟ್ರೀ ಯಾರಿಗೂ ಸರಿಸಾಟಿಯೇನಿಲ್ಲ.

ದಿವಾಸ್ ಅಭಿನಯದ ಹಲವಾರು ವಿಡಿಯೋಗಳು ವೈರಲ್ ಆಗಿದ್ದು, ಅವರು ಬೀಳುತ್ತಿರುವ ಒಂದು ವಿಡಿಯೋ ಮಾತ್ರ ಹೆಚ್ಚು ಸದ್ದು ಮಾಡುತ್ತಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಅದ್ಭುತ ಪ್ರದರ್ಶನ ನೀಡಿದ್ದಕ್ಕೆ ನಟಿಯರನ್ನು ಶ್ಲಾಘಿಸಿದರು. ಮುಜುಗರದ ಕ್ಷಣವನ್ನು ಸ್ಫೂರ್ತಿಯಾಗುವಂತೆ ಅಭಿನಯಿಸಿದ್ದೀರಾ. ನಿಜವಾಗಿಯೂ ನಿಮ್ಮ ಆತ್ಮಸ್ಥೈರ್ಯವನ್ನು ಮೆಚ್ಚಬೇಕು ಎಂದು ಹೊಗಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net