ವಿಧಾನಸೌಧ ವೀಕ್ಷಣೆಗೆ ಮುಕ್ತ ಅವಕಾಶ; ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್| vidhansoudha

vidhanasoudha
Published on

ಬೆಂಗಳೂರು : ಇಂದಿನಿಂದ ವಿಧಾನಸೌಧ ಗೈಡೆಡ್ ಟೂರ್ (Guided Tour) ಆರಂಭವಾಗಿದ್ದು, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ವಿಧಾನಸೌಧ ವೀಕ್ಷಣೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದರಿಂದ, ಇಂದಿನಿಂದ ಪ್ರವಾಸ ಆರಂಭವಾಗಿದೆ.

ಇದೇ ಮೊದಲ ಬಾರಿಗೆ ಸರ್ಕಾರ ವಿಧಾನಸೌಧ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದೆ. ಮೊದಲ ದಿನವೇ ವಿಧಾನಸೌಧ ಟೂರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ತಲಾ 25 ರಿಂದ 30 ಜನ ಇರುವ ನಾಲ್ಕೈದು ಬ್ಯಾಚ್‌ಗಳ ಮೂಲಕ ಪ್ರವಾಸಿಗರು ವಿಧಾನಸೌಧದ ಒಳಗೆಲ್ಲಾ ಸುತ್ತಾಡಿ, ಅದರ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಬಂದ ಹಲವರು ವಿಧಾನಸೌಧದ ಒಳಗೆ ಹಾಗೂ ಹೊರಗೆ ಸುತ್ತಾಡಿ, ಫೋಟೋವನ್ನು ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.

Vidhanasoudha

ಹತ್ತು ಗೈಡ್‌ಗಳು ಪ್ರವಾಸಿಗರಿಗೆ ವಿಧಾನಸೌಧ ವೀಕ್ಷಣೆ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಪ್ರವಾಸಿಗರಿಗೆ ವಿಧಾನಸೌಧದ ಮಹತ್ವ, ಇತಿಹಾಸ, ಪರಂಪರೆ, ಅಧಿವೇಶನ ಸಭಾಂಗಣ, ಮಹಾತ್ಮಾಗಾಂಧಿ ಪ್ರತಿಮೆ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಪ್ರತಿಮೆ, ವಿಧಾನಸೌಧ ಫೌಂಡೇಷನ್ ಕಲ್ಲು, ಗ್ಯಾಲರಿಗಳು, ವಿಧಾನಸೌಧದ ಕಾರಿಡಾರ್‌ಗಳು, ಕಟ್ಟಡ ವೈಶಿಷ್ಟ್ಯಗಳ ಮಾಹಿತಿ ನೀಡಲಿದ್ದಾರೆ.

ಪ್ರತೀ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರ ವಿಧಾನಸೌಧ ಟೂರ್‌ಗೆ ಅವಕಾಶವಿರುತ್ತದೆ. 16 ವರ್ಷ ಮೇಲ್ಪಟ್ಟ ಎಲ್ಲರಿಗೂ ತಲಾ 50 ರೂ, 15 ವರ್ಷದೊಳಗಿನ ಮಕ್ಕಳಿಗೆ ಹಾಗೂ ಎಸ್‌ಎಸ್‌ಎಲ್‌ಸಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದ್ದು, ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಅವಕಾಶವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net