Valentine’s Day | ಪ್ರೇಮಿಗಳ ವಾರದಲ್ಲಿ ಪತಿಗಾಗಿ ವಿಶೇಷ ಪರಾಠ ಮಾಡಿದ ಮುದ್ದಿನ ಮಡದಿ; 6 ಮಿಲಿಯನ್​​ಗಿಂತಲೂ ಹೆಚ್ಚು ಮಂದಿ ಮೆಚ್ಚಿದ Video Viral

Untitled design (7)
Published on

ಪ್ರೇಮಿಗಳ ವಾರ ಆರಂಭವಾಗಿದೆ. ರೋಸ್ ಡೇ, ಪ್ರಪೋಸ್ ಡೇ, ಚಾಕೊಲೇಟ್ ಡೇ ಮುಂತಾದ ವಿಶೇಷ ದಿನವನ್ನು ಪ್ರೇಮಿಗಳು ಮಾತ್ರವಲ್ಲ ದಂಪತಿ ಕೂಡ ಪ್ರತಿದಿನ ಆಚರಿಸುತ್ತಿದ್ದಾರೆ. ಗುಲಾಬಿ ದಿನದಂದು ನೀವು ಸಾಮಾಜಿಕ ಜಾಲತಾಣದಲ್ಲಿ ಅನೇಕ ಪೋಸ್ಟ್‌ಗಳು ಮತ್ತು ಮೀಮ್‌ಗಳನ್ನು ನೋಡಿರಬೇಕು. ಆದರೆ ಇದೆಲ್ಲದರ ನಡುವೆ ದಂಪತಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​(Video Viral) ಆಗುತ್ತಿದೆ. ಈ ವಿಡಿಯೋ ನೋಡುಗರ ಹೃದಯ ಗೆಲ್ಲುತ್ತಿದೆ.

ವಾಸ್ತವವಾಗಿ ಪ್ರೇಮಿಗಳ ದಿನದ ಮೊದಲು ತನ್ನ ಗಂಡನಿಗೆ ವಿಶೇಷ ಭಾವನೆ ಮೂಡಿಸಲು ಮಹಿಳೆಯೊಬ್ಬರು ಅಡುಗೆಮನೆಯಲ್ಲಿ ಪ್ರದರ್ಶಿಸಿದ ಕರಕುಶಲತೆಯು ಎಲ್ಲರ ಗಮನ ಸೆಳೆದಿದೆ.ಮಹಿಳೆಯೊಬ್ಬರು ವಿಶೇಷವಾದ ವ್ಯಾಲೆಂಟೈನ್ಸ್ ಆವೃತ್ತಿಯ ಪರಾಠವನ್ನು ತಯಾರಿಸಿದ್ದು, ಅದು ಖಂಡಿತವಾಗಿಯೂ ಹೃದಯಗಳನ್ನು ಗೆಲ್ಲುತ್ತದೆ. ವೈರಲ್​ ವಿಡಿಯೋದಲ್ಲಿ ನೀವು ಎರಡು ರೀತಿಯ ಪರಾಠಾಗಳನ್ನು ತಟ್ಟೆಯಲ್ಲಿ ಇಡುವುದನ್ನು ನೋಡುತ್ತೀರಿ. ಆದರೆ ಪ್ರತಿ ಪರಾಠದ ಮಧ್ಯದಲ್ಲಿ ಹೃದಯದ ಆಕಾರದಲ್ಲಿ ಮತ್ತೊಂದು ಪರಾಠವನ್ನು ಇರಿಸಲಾಗಿದೆ. ತನ್ನ ಹೆಂಡತಿಯ ಸೃಜನಶೀಲತೆಯನ್ನು ನೋಡಿ ಪತಿಯು ನಗುತ್ತಲೇ ಇರುವುದನ್ನು ನೀವು ನೋಡಬಹುದು. ಇದನ್ನು ನೋಡಿ ಮಹಿಳೆ ಕೂಡ ನಾಚಿಕೊಳ್ಳಲು ಪ್ರಾರಂಭಿಸುತ್ತಾರೆ. ಈ ವಿಡಿಯೋ ನೋಡಿದ ನಂತರ ನೀವು ಕೂಡ ಶುದ್ಧ ದೇಸಿ ಪ್ರೇಮ ಇಷ್ಟು ಸುಂದರ ಎಂದು ಹೇಳುತ್ತೀರಿ.

ಇದುವರೆಗೂ ಈ ವಿಡಿಯೋವನ್ನು 6 ಮಿಲಿಯನ್​ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ನಾವು ಹುಡುಗಿಯ ಕಠಿಣ ಪರಿಶ್ರಮವನ್ನು ಮೆಚ್ಚಬೇಕು, ಬ್ರದರ್​ ಅಂತಹ ಹೆಂಡತಿಯನ್ನು ಪಡೆಯುವ ಮೂಲಕ ಜೀವನದಲ್ಲಿ ಗೆದ್ದಿದ್ದಾರೆ, ಪ್ರೀತಿಯನ್ನು ವ್ಯಕ್ತಪಡಿಸಲು ಎಷ್ಟು ಸುಂದರವಾದ ಮಾರ್ಗ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net